Do yoga daily for good health: Vijayanand Kashappanava  ಸಧೃಡ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಿ : ಶಾಸಕ ವಿಜಯಾನಂದ ಕಾಶಪ್ಪನವರ

WhatsApp Group Join Now
Telegram Group Join Now
Instagram Group Join Now
Spread the love

ilkal yoga day vijayanand kashappanavar

yoga ಸಧೃಡ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಿ : ಶಾಸಕ ವಿಜಯಾನಂದ ಕಾಶಪ್ಪನವರ

ಇಳಕಲ್ : ಸಧೃಡ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ ಕೆಲ ಸಮಯವಾದರೂ ಯೋಗ ಮಾಡಿ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಶಪ್ಪನವರ ಕರೆಕೊಟ್ಟರು.
ಶುಕ್ರವಾರದಂದು ಇಲ್ಲಿನ ವೀರಮಣಿ ಕ್ರೀಡಾಂಗಣದಲ್ಲಿ ತಹಶೀಲ್ದಾರರ ಕಚೇರಿ, ತಾಲೂಕು ಪಂಚಾಯತಿ, ತಾಲೂಕಾಡಳಿತ, ನಗರಸಭೆ, ಶಿಕ್ಷಣ ಇಲಾಖೆ ಮತ್ತು ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ವತಿಯಿಂದ ನಡೆದ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಗಿ ಮುನಿವರ್ಯಗಳ ಕಾಲದಿಂದಲೂ ಈ ನಾಡಿನಲ್ಲಿ ಯೋಗ ಇತ್ತು ಅಂದಿನ ಜನರು ಇದರಿಂದಲೇ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು ಬಂದಿದ್ದರು ಎಂಬ ಸತ್ಯವನ್ನು ನಾವ್ಯಾರು ಮರೆತಿಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ಸತೀಶ ಕೂಡಲಗಿ, ಉಪ ತಹಸೀಲ್ದಾರ ಈಶ್ವರ ಗಡ್ಡಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಮುರಳಿ ದೇಶಪಾಂಡೆ ಸಂಘದ ವೈಸ್ ಚೇರಮನ್ ಅರುಣ ಬಿಜ್ಜಳ , ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ, ಯೋಗ ಗುರು ಸಂಗಮೇಶ ಬಂಡರಗಲ್ಲ ಆಗಮಿಸಿ ಮಾತನಾಡಿದರು
ಸಾನಿಧ್ಯವನ್ನು ಗುರುಮಹಾಂತಶ್ರೀಗಳು ವಹಿಸಿ ಮಾತನಾಡಿ ಜಗತ್ತಿನ ಎಲ್ಲೆಡೆ ಇಂದು ಯೋಗದತ್ತ ಜನರು ವಾಲುತ್ತಿದ್ದಾರೆ ಅದಕ್ಕೆ ಭಾರತವೇ ಮೂಲ ಕಾರಣ ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು
ನಂತರ ನಗರದ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸಿ ಕೊಡಲಾಯಿತು.


Spread the love

Leave a Comment

error: Content is protected !!