
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ಸೂಗುರೇಶ ನಾಗಲೋಟಿ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಭಾರತೀಯ ಜನತಾ ಪಕ್ಷ ನಗರಮಂಡಲದ ಶಕ್ತಿ ಕೇಂದ್ರದ ಸದಸ್ಯರ ನೇತೃತ್ವದಲ್ಲಿ ಗುರುವಾರದಂದು ವಿಶ್ವ ಪರಿಸರ ದಿನದ ಅಂಗವಾಗಿ ನಗರದ ರುದ್ರಭೂಮಿಯ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಈ ಸಮಯದಲ್ಲಿ ನಗರಸಭೆಯ ಸದಸ್ಯ ಸೂಗುರೇಶ ನಾಗಲೋಟಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತ ಸಸಿಗಳನ್ನು ನೆಟ್ಟು ನಶಸಿ ಹೋಗುತ್ತಿರುವ ನಮ್ಮ ಪರಿಸರವನ್ನು ಸಂರಕ್ಷಿಸಿಸೋಣ ಸಸಿಗಳನ್ನು ನೆಟ್ಟುವದ್ದರಿಂದ ನಮ್ಮಗೆ ಶುದ್ದವಾದ ಗಾಳಿ ಮತ್ತು ಒಳ್ಳೆಯ ಆರೋಗ್ಯವನ್ನು ನೀಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಅವುಗಳನ್ನು ದೊಡ್ಡ ಗಿಡಗಳಾಗಿ ಬದಲಾಗುವವರೆಗೆ ಮಕ್ಕಳಂತೆ ಪೋಷಣೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಜಿ,ಎಚ್,ಗುಳೇದ, ನಗರಸಭೆ ಮಾಜಿ ಸದಸ್ಯ ಮಂಜುನಾಥ ಹೊಸಮನಿ, ತುಂಬದ, ವೀರೇಶ ಹಿರೇಮನಿ, ಗಣೇಶ ಯರಡೋಣಿ, ವೀರೇಶ ಮನ್ನಾಪೂರ, ತುಂಬದ, ಚಿನ್ನು ಚಿನ್ನಾಪೂರ, ಮಲ್ಲು ಕುಂಬಾರ ಮತ್ತಿತ್ತರರು ಇದ್ದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)





