Tiger Day ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
೨೯ ಜುಲೈಯನ್ನು ಅಂತರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಹುಲಿ ದಿನದ ಆಚರಣೆ ಪ್ರಯುಕ್ತ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಲಾಯದಗುಂದಿಯಲ್ಲಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ
ಬಾದಾಮಿ ವಲಯ ಅರಣ್ಯ ಇಲಾಖೆ ಅಧಿಕಾರಿ ಮಹೇಶ್ ಮರಿಯಣ್ಣವರ ಹಾಗೂ ಬಾದಾಮಿ ಅರಣ್ಯ ಇಲಾಖೆ ಸಿಬ್ಬಂದಿಯವರ
ಸಮ್ಮುಖದಲ್ಲಿ ಪ್ರಬಂಧ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಹುಲಿ ದಿನದ ಪ್ರಯುಕ್ತ ಪ್ರಬಂಧ
ಮತ್ತು ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ೩೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಮೂಲಕ ವನ್ಯಜೀವಿಗಳನ್ನು ಉಳಿಸಿ ಬೆಳೆಸುವ
ಬಗ್ಗೆ ವಿದ್ಯಾರ್ಥಿಗಳಿಗೆ ಉತ್ಸಾಹ ಬರುವ ಹಾಗೆ ಈ ಸ್ಪರ್ಧೆ ಆಯೋಜನೆ ಮಾಡುವ ಮೂಲಕ ವನ್ಯಜೀವಿಗಳ ಬಗ್ಗೆ ಜಾಗೃತಿ ಅವುಗಳಿಂದ
ಪರಿಸರಕ್ಕೆ ಎಷ್ಟು ಪ್ರಯೋಜನ ಎನ್ನುವ ಬಗ್ಗೆ ವನ್ಯಜೀವಿಗಳ ಮಹತ್ವಗಳ ಬಗ್ಗೆ ಬಾದಾಮಿ ವಲಯ
ಅರಣ್ಯ ಇಲಾಖೆ ಜಾಗೃತಿ ಹಾಗೂ ಮೂಡಿಸಿತು ಎನ್ನಬಹುದು.
ವರದಿ:– ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ