2024 ರ ಲೋಕಸಭಾ ಚುನಾವಣೆಗೆ ತುಮಕೂರದಿಂದ ಮಾಜಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಬುಧವಾರದಂದು ೨ ನೇ ಲಿಸ್ಟ್ನಲ್ಲಿ ಅವರ ಹೆಸರು ಬಂದಿದ್ದು. ಇಂದು ಗುರವಾರದಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ವಿ ಸೋಮಣ್ಣನವರ ಹೆಸರು ಲಿಸ್ಟ್ನಲ್ಲಿ ಪ್ರಕಟವಾಗಿದ್ದರಿಂದ ಅಭಿಮಾನಿಗಳು ಕಾರ್ಯಕರ್ತರು ಶುಭಾಶಯವನ್ನು ಕೋರಿ ಗೆಲುವು ನಿಮ್ಮದೆ ಎಂದು ಹಾರೈಸುತ್ತಿದ್ದಾರೆ.