ರೈತ ಹುತಾತ್ಮ ದಿನಾಚರಣೆ : ಇಳಕಲ್ ರೈತರು ಭಾಗಿ
ನವಲಗುಂದದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಇಳಕಲ್ ತಾಲೂಕಿನ ರೈತರು ಭಾಗವಹಿಸಿದ್ದರು.
ನರಗುಂದ ಬಂಡಾಯ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಬಾಗಲಕೋಟೆ ಜಿಲ್ಲೆ ರೈತ ಸಂಘ ಹಾಗೂ ಹಸಿರುಸೇನೆಯ
ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ತಾಲೂಕು ರೈತ ಸಂಘದ ಸಂಚಾಲಕ ಗುರು ಗಾಣಿಗೇರ, ಬಸನಗೌಡ ಪೈಲ್,
ಮಧುಸೂದನ್ ತಿವಾರಿ , ರಸೂಲಸಾಬ ತಹಸೀಲ್ದಾರ ಮತ್ತಿತರರು ಉಪಸ್ಥಿತರಿದ್ದರು.