Fight against granite ಗ್ರಾನೈಟ್ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ವಿರುದ್ಧ ಹೋರಾಟ : ಕರವೇ ಅಧ್ಯಕ್ಷ ಮಹಾಂತೇಶ ವಂಕಲಕುAಟಿ
ಇಳಕಲ್ – ಕೃಷಿ ಜಮೀನಿನಲ್ಲಿ ಅಧಿಕೃತವಾಗಿ ಪರವಾನಿಗೆ ಪಡೆಯದೆ ಕಲ್ಲು ಮಾರಾಟ ಮಾಡುವ ಮಳಿಗೆಯನ್ನು ಕಿತ್ತು ಹಾಕುವವರೆಗೂ ಮತ್ತು ಚೆಕ್ ಪೋಸ್ಟ್ ಮಾಡುವವರೆಗೂ ಅನಿರ್ದಿಷ್ಟಕಾಲದ ಧರಣಿ ಸತ್ಯಾಗ್ರಹ ನಡೆಸಲಾಗುದವದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಹಾಂತೇಶ ವಂಕಲಕುAಟಿ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ೧೨.೦೯.೨೦೨೪ ರಂದು ಹಿರೇ ಉಪ್ಪನಾಳ ಗ್ರಾಮದ ಜಮೀನ ರಿ. ಸ. ನಂ ೨೭/೩ ಕ್ಷೇತ್ರ ೦೨:೦೪ ಮತ್ತು ೨೭/೬ ಕ್ಷೇತ್ರ೦೨:೦೫ ಜಮೀನು, ಬಸಪ್ಪ ತಂದೆ ಪರಪ್ಪ ಸಜ್ಜನ ಇವರ ಹೆಸರಿನಲ್ಲಿ ಇದ್ದು ಸದರಿ ಜಮೀನುಗಳು ಕೃಷಿಗೆ ಯೋಗ್ಯವಾದ ಜಮೀನುಗಳು ಇರುತ್ತದೆ.
ಇದರ ವಿಚಾರವಾಗಿ ಸಂಬAಧಿಸಿದ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ದಾಖಲೆ ಸಮೇತ ವರದಿ ಮಾಡಿದರೂ ಕೂಡ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ, ಅಲ್ಲಿಗೆ ತಾವುಗಳು ಹೋಗಿ ಸ್ಥಳ ಪರಿಶೀಲನೆ ಮಾಡಿದರೂ ಕೂಡ ಏನು ಪ್ರಯೋಜನವಾಗಿಲ್ಲ ಆ ಕಾರಣಕ್ಕೋಸ್ಕರ ಕರ್ನಾಟಕ ರಕ್ಷಣಾ ವೇದಿಕೆ ತಮ್ಮ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ,
ಹಾಗೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಇಳಕಲ್ ಹಾಗೂ ಹುನುಗುಂದ ತಾಲೂಕಗಳಲ್ಲಿ ಗ್ರಾನೈಟ್ ಕಲ್ಲುಗಳನ್ನು ಮಾರಾಟ ಮಾಡುವ ಮತ್ತು ಪ್ರದರ್ಶಿಸುವ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಆಗುವ ಅವ್ಯವಹಾರಗಳು ಬಗ್ಗೆ ಕುರಿತು ಚೆಕ್ ಪೋಸ್ಟ್ ಮಾಡುವಂತೆ ಅ.೧೪ ರಂದು ಇಳಕಲ್ ತಾಲೂಕ ಕಚೇರಿಯ ಮುಂದೆ ಅನಿದಿಷ್ಟ ಅವಧಿಯವರೆಗೆ ಸತ್ಯಾಗ್ರಹ ಹಮ್ಮಿಕೊಂಡಿದೆ.