ಹೊತ್ತಿ ಉರಿದ ಮೇವಿನ ಬಣವೆಗಳು :೧೨ ಲಕ್ಷ ರೂ ಮೌಲ್ಯದ ಮೇವು ಭಸ್ಮ
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಳ್ಳಿ ಗ್ರಾಮದ ಹೊರವಲಯದಲ್ಲಿರುವ ರೈತರ ಬಣವೆಗೆ ಮಂಗಳವಾರ ಮಧ್ಯಾಹ್ನ ೧ ಗಂಟೆಗೆ ಸುಮಾರಿಗೆ ಬೆಂಕಿ ಬಿದ್ದು ಅಂದಾಜು ೧೨ ಲಕ್ಷ ರೂ ಮೌಲ್ಯದ ಸಂಗ್ರಹಿಸಿದ ೨೯ ಜೋಳದ ಮೇವು ಭಸ್ಮವಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಹುನಗುಂದ ತಹಸೀಲ್ದಾರ ನಿಂಗಪ್ಪ ಬಿರಾದರ, ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ, ಗ್ರಾಮ ಲೆಕ್ಕಾಧಿಕಾರಿ ವಿನೋದ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ