ಸರಕಾರದ ಆದೇಶಗಳನ್ನು ಸರಿಯಾಗಿ ಪಾಲಿಸಿ : ಕ್ಷೇತ್ರಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೇದಾರ ಕರೆ
ಇಳಕಲ್ : ರಾಜ್ಯ ಸರಕಾರ ಕಾಲ ಕಾಲಕ್ಕೆ ರೂಪಿಸುವ ಆದೇಶಗಳನ್ನು ಎಲ್ಲಾ ಶಾಲೆಗಳು ಸರಿಯಾಗಿ ಪಾಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಕರೆ ಕೊಟ್ಟರು.
ಇಲ್ಲಿಯ ಎಸ್ ಆರ್ ಕಂಠಿ ಬಾಲಕಿಯರ ಹೈಸ್ಕೂಲ್‌ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಳಕಲ್-ಹುನಗುಂದ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೪-೨೫ ನೇ ಶೈಕ್ಷಣಿಕ ವರ್ಷದ ಆರಂಭದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶೈಕ್ಷಣಿಕ ಬಲವರ್ಧನೆ ವರ್ಷವನ್ನಾಗಿ ಆಚರಿಸುವದು, ಇಲಾಖೆಯ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕದ ಅನುಸಾರ ಶಾಲೆಯ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುವದು, ಶಾಲೆಯ ಸಂಪೂರ್ಣ ಸ್ವಚ್ಚತೆಗೊಳಿಸಿ ಶಾಲಾ ಪ್ರಾರಂಭದ ದಿನವೇ ಮಕ್ಕಳಿಗೆ ಸಿಹಿ ವಿತರಿಸಿ ಪಠ್ಯಪುಸ್ತಕಗಳನ್ನು ವಿತರಿಸುವದು, ಅರ್ಹ ಮಕ್ಕಳನ್ನು ಕಡ್ಡಾಯವಾಗಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ದಾಖಲೀಸುವದು, ಶಾಲೆಗೆ ಸಂಬAಧಿಸಿದ ಎಲ್ಲ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವದು, ತಾಲ್ಲೂಕಿನ ಅಭಿವೃದ್ಧಿಗಾಗಿ ೫ ವಿಶೇಷ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಶಿಕ್ಷಣ ಇಲಾಖೆ ತರುವ ಕಾನೂನು ಕಟ್ಟಳೆಗಳನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಮನ್ವಯಾಧಿಕಾರಿಗಳಾದ ವಿನೋದಕುಮಾರ ಭೋವಿ ಅಧಿಕಾರಿಗಳಾದ ಸಿದ್ದು ಪಾಟೀಲ, ಮುಖ್ಯಗುರು ಸಂಗಣ್ಣ ಗದ್ದಿ, ಮೂಲಿಮನಿ, ಪೈಲ್, ಬಾಗವಾನ, ಹೊಸೂರ, ಶಿಕ್ಷಕರ ಸಂಘದ ಅಧ್ಯಕ್ಷ ರಂಗನಾಥ ಮಾಸರಡ್ಡಿ, ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪರಶುರಾಮ ಪಮ್ಮಾರ ಆಗಮಿಸಿದ್ದರು.
ಇಳಕಲ್ ತಾಲೂಕಿನ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲಾ ಮುಖ್ಯ ಗುರುಗಳು, ಬಿಆರ್ ಪಿ, ಸಿಆರ್ ಪಿ ಯವರು ಹಾಜರಿದ್ದರು.