PC Gaddigoudar : ಗದ್ದಿಗೌಡರ ಪರ : ಮನೆ ಮನೆಗೆ ತೆರಳಿ ಮತಯಾಚಿಸಿದ ದೊಡ್ಡನಗೌಡ್ರ
೨೦೨೪ ರ ಲೋಕಸಭಾ ಚುನಾವಣೆಯ ಬಾಗಲಕೋಟ ಬಿಜೆಪಿ ಅಭ್ಯರ್ಥಿ ಪಿ.ಸಿ,ಗದ್ದಗೌಡರ ಪರವಾಗಿ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರದಂದು ನಗರದ ಡಿವ್ಹಿಜನ್ ನಂ ೦೪ ರಲ್ಲಿನ ಗಜಾನನ ಆಶಿರ್ವಾದದೊಂದಿಗೆ ಮತಬೇಟೆಯನ್ನು ನಡೆಸಿದರು.
ವಾರ್ಡಿನ ಮುಖಂಡ ವೆಂಕಟೇಶ ಪೋತಾ ಅವರ ನೇತೃತ್ವದಲ್ಲಿ ಮತಯಾಚಿಸಿದರು.ಈ ಸಮಯದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರ, ಪ್ರಮುಖರು, ನಗರಸಭೆ ಸದಸ್ಯರುಗಳು,ಶಕ್ತಿ ಕೇಂದ್ರದ ಪ್ರಮುಖರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೇಂದ್ರ ಸರಕಾರ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಸಾಧನೆಗಳ ಕೈಪಿಡಿಯನ್ನು ಮತದಾರರಿಗೆ ನೀಡುವ ಮೂಲಕ ಬಿಜೆಪಿಗೆ ಮತ ಹಾಕುವಂತೆ ಮತಯಾಚನೆ ನಡೆಸಿದರು.