For the development and security of the country: Vote for Modi: Former MLA Dodangowda Patil ದೇಶದ ಅಭಿವೃದ್ಧಿ ಹಾಗೂ ಭದ್ರತೆಗಾಗಿ: ಮೋದಿಗೆ ಮತ ಹಾಕಿಸಿ : ಮಾಜಿ ಶಾಸಕ ದೊಡ್ಡನಗೌಡ ಪಾಟೀಲ
ದೇಶದ ಅಭಿವೃದ್ಧಿ ಹಾಗೂ ಭದ್ರತೆಗಾಗಿ: ಮೋದಿಗೆ ಮತ ಹಾಕಿಸಿ : ಮಾಜಿ ಶಾಸಕ ದೊಡ್ಡನಗೌಡ ಪಾಟೀಲ
ದೇಶದ ಅಭಿವೃದ್ಧಿ ಭದ್ರತೆ ಮತ್ತು ಜನರ ಕಲ್ಯಾಣಕ್ಕಾಗಿ ಹಲವಾರು ಜನಪರ ಯೋಜನೆಯನ್ನು ಜಾರಿಗೆಯನ್ನು ಹತ್ತು ವರ್ಷಗಳಲ್ಲಿ ಮೋದಿಯವರು ತಂದಿದ್ದಾರೆ. ಮೂರನೇ ಅವಧಿಗೆ ಮೋದಿಯವರನ್ನು ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವಲ್ಲಿ ಎಲ್ಲ ಕಾರ್ಯಕರ್ತರ ಶ್ರಮಿಸಬೇಕು ಎಂದು ಮಾಜಿ ಶಾಸ ದೊಡ್ಡನಗೌಡ ಪಾಟೀಲ ಹೇಳಿದರು.
ಹುನಗುಂದ ಪಟ್ಟಣದ ನಾಗರಾಳ ಜಿನ್ನಿಂಗ್ ಪ್ಯಾಕ್ಟರಿನಲ್ಲಿ ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ನಡೆದ ತಾಲೂಕು ಬಿಜೆಪಿ ಭೂತ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಮೋದಿಜಿ ಮತ್ತು ಪಿ.ಸಿ.ಗದ್ದಿಗೌಡರನ್ನು ಗೆಲ್ಲಿಸುವಲ್ಲಿ ತಾಲೂಕಿನ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೋದಿಯವರ ನೂರಕ್ಕು ಜನಪರ ಯೋಜನೆ ಮತ್ತು ಸಾಧನೆಯನ್ನು ಜನರಿಗೆ ತಿಳಿಸುವದರ ಮೂಲಕ ಮತಯಾಚನೆ ಮಾಡಬೇಕೆಂದು ತಿಳಿಸಿದರು.
ಬಿಜೆಪಿ ಮುಖಂಡ ಡಾ.ಮಹಾಂತೇಶ ಕಡಪಟ್ಟಿ, ಮಾಜಿ ಜಿಪಂ ಸದಸ್ಯ ವಿರೇಶ ಉಂಡೋಡಿ ಮಾತನಾಡಿ ಬಿಜೆಪಿ ಪಕ್ಷವನ್ನು ಮತ್ತೇ ಎಲ್ಲರೂ ಒಗ್ಗೂಡಿಕೊಂಡು ಲೋಕಸಭೆಯ ಚುನಾವಣೆಯಲ್ಲಿ ಮತ್ತೇ ದೇಶದಲ್ಲಿ ಬಿಜೆಪಿಯನ್ನು ಗೆಲ್ಲಸಿಸಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ತಾಲೂಕಾ ಬಿಜೆಪಿ ಪಕ್ಷದ ಅಧ್ಯಕ್ಷ ಮಹಾಂತಗೌಡ ಪಾಟೀಲ (ತೊಂಡಿಹಾಳ) ಮುಖಂಡರಾದ ಅಜ್ಜಪ್ಪಗೌಡ ನಾಡಗೌಡ್ರ, ಮಲ್ಲಿಕಾರ್ಜುನ ಹಳಪೇಟಿ, ರಾಜು ನಾಡಗೌಡ್ರ, ಮಹಾಂತೇಶ ತೆಗ್ಗಿನಮಠ, ರಾಮನಗೌಡ ಬೆಳ್ಳಿಹಾಳ, ಮಹಾಂತೇಶ ರೇವಡಿ, ಮಂಜು ಆಲೂರ, ಮಹಾಂತೇಶ ಚಿತ್ತವಾಡಗಿ, ಮಹೇಶ ಬೆಳ್ಳಿಹಾಳ,ಅಪ್ಪು ಆಲೂರ, ವಿರುಪಾಕ್ಷಿ ಹಿರೇಮಠ, ಬಾಬು ನಾಗರಾಳ, ರೆಡ್ಡಿನಾಗರಾಳ, ರಮೇಶ ಗೋವಿನಗಿಡದ ಸೇರಿದಂತೆ ಇತರರು ಇದ್ದರು.