catch leopards ಲಾಯದಗುಂದಿಯಲ್ಲಿ ಚಿರತೆ ಹಿಡಿಯಲು ಬೋನು ಇಟ್ಟು ಕಾರ್ಯಚರಣೆ ನಡೆಸಿದ ಅರಣ್ಯಾಧಿಕಾರಿಗಳು
ಚಿರತೆ ಹಿಡಿಯಲು ಬೋನು ಇಟ್ಟು ಕಾರ್ಯಚರಣೆ ನಡೆಸಲು ತಯಾರಾದ ಬಾದಾಮಿ ವಲಯ ಅರಣ್ಯ ಅಧಿಕಾರಿ ಮಹೇಶ್ ಮರಿಯಣ್ಣವರ
ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿ.
ಗುಳೇದಗುಡ್ಡ ಭಾಗದಲ್ಲಿ ಮತ್ತೆ ಚಿರತೆ ಹಾವಳಿ, ಚಿರತೆ ಆಕ್ರಮಣಕ್ಕೆ ನಾಯಿ ಬಲಿಯಾಗಿದ್ದು ಸಾರ್ವಜನಿಕರು
ಸುದ್ದಿ ತಿಳಿದ ಸಾರ್ವಜನಿಕರು ಭಯಭೀತಾರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಾಯದಗುಂದಿ ವಲಯ ಪ್ರದೇಶದಲ್ಲಿ ಚಿರತೆ ಹಾವಳಿ ಮತ್ತೆ
ಶುರುವಾಗಿದ್ದು ನಿನ್ನೆಯಷ್ಟೇ ಚಿರತೆ ದಾಳಿಗೆ ನಾಯಿಯೊಂದು ಬಲಿಯಾಗಿರುವುದು ದೃಢಪಟ್ಟಿದ್ದು,
ಸಾರ್ವಜನಿಕರು ಭಯ ಭೀತರಾಗಿರುವ ಹಿನ್ನೆಲೆಯಲ್ಲಿ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ಯನ್ನು
ಚುರುಕುಗೊಳಿಸಲಾಗಿದೆ ಸಾರ್ವಜನಿಕರು ಈ ಕಾರ್ಯಾಚರಣೆಗೆ ಸಹಕರಿಸಬೇಕು ಎಂದು ಬಾದಾಮಿ ವಲಯ
ಅರಣ್ಯಾಧಿಕಾರಿ ಮಹೇಶ್ ಮರಿಯಣ್ಣವರ ತಿಳಿಸಿದ್ದಾರೆ.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ