ಕಪಿಲತೀರ್ಥಕ್ಕೇ ಭೇಟಿ ನೀಡಿದ ಮಾಜಿ ಶಾಸಕ ಬಯ್ಯಾಪೂರ
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದಲ್ಲಿನ ಕಪಿಲತೀರ್ಥ ಜಲಪಾತಕ್ಕೆ ಕುಷ್ಟಗಿ
ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ ಮತ್ತು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಭೇಟಿ ನೀಡಿದರು.
ಮೈದುಂಬಿ ಹರಿಯುತ್ತಿರುವ ಜಲಪಾತವನ್ನು ವೀಕ್ಷಿಸಿದರು. ನಂತರ ಆ ಪ್ರದೇಶವನ್ನು ಅಭಿವೃದ್ಧಿಯತ್ತ ಮತ್ತು
ನೋಡಲು ಬಂದAತಹ ಪ್ರವಾಸಿಗರಿಗೆ ಕೊಠಡಿಗಳನ್ನು ನಿರ್ಮಿಸುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು.
ಇದು ಕೊಪ್ಪಳ ಜಿಲ್ಲೆಯಲ್ಲಿಯೇ ಏಕೈಕ ಕಿರು ಜಲಪಾತವಾಗಿದ್ದು ಇದರ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಲಾಗುವದು
ಎಂದು ಹೇಳಿದರು. ಈ ಸಮಯದಲ್ಲಿ ತಾಲೂಕಾ ಗ್ಯಾರಂಟಿ ಯೋಜನೆ
ಅಧ್ಯಕ್ಷ ಫಾರೂಕ್ ಡಾಲಾಯತ್ ಮತ್ತು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.