From march 25 sslc examination : announced by Hungund b. O jasmine killedar ಮಾರ್ಚ ೨೫ ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೇದಾರ

WhatsApp Group Join Now
Telegram Group Join Now
Instagram Group Join Now
Spread the love

ಮಾರ್ಚ ೨೫ ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೇದಾರ

 

ಹುನಗುಂದ:ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾ.25 ರಿಂದ ಏ.6 ರವರೆಗೆ ಬೆಳಗ್ಗೆ 10.30 ರಿಂದ 1.30 ರವರೆಗೆ ಹುನಗುಂದ ಹಾಗೂ ಇಳಕಲ್ಲ ಅವಳಿ ತಾಲೂಕಿನ 14 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೇದಾರ ತಿಳಿಸಿದರು.


ಪಟ್ಟಣದ ಬಿಇಒ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಮುಖ್ಯಅಧೀಕ್ಷಕರು ೧೪, ಉಪಮುಖ್ಯಧೀಕ್ಷಕರು ೭7, ಕಸ್ಟೋಡಿಯನ್ 14, ಮಾರ್ಗಾಧಿಕಾರಿಗಳು 7 ಸ್ಥಾನಿಕ ಜಾಗೃತದಳ ೧೪ ಮೊಬೈಲ್ ಸ್ವಾಧೀನಾಧಿಕಾರಿಗಳು 14, ಸಿಸಿಟಿವಿ ವಿಕ್ಷಕರು 14, ಕೊಠಡಿ ಮೇಲ್ವಿಚಾರಕರು ಇತರೆ ಸಿಬ್ಬಂದಿಗಳು ಸೇರಿದಂತೆ ಅವಳಿ ತಾಲೂಕಿನ ಪರೀಕ್ಷಾ ಕೇಂದ್ರಕ್ಕೆ ಒಟ್ಟು 300 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಹೇಳಿದರು.

ಹುನಗುಂದ-ಇಲಕಲ್ಲ ತಾಲೂಕಿನಲ್ಲಿ ೧4 ಪರೀಕ್ಷಾ ಕೇಂದ್ರಗಳಲ್ಲಿ 5327  ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳು ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರದಿ0ದ 200 ಮೀಟರ್ ವರೆಗೆ ೧೪೪ ಜಾರಿಯಲ್ಲಿರುತ್ತದೆ.

ಪರೀಕ್ಷಾ ಸಮಯಕ್ಕಿಂತ ೩೦ ನಿಮಿಷ ಮುಂಚಿತವಾಗಿ ವಿದ್ಯಾರ್ಥಿಗಳು ಕೇಂದ್ರದಲ್ಲಿ ಇರಬೇಕು. ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ ಘಟಕಕ್ಕೆ ಇಲಾಖೆಯಿಂದ ತಿಳಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ. ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಗವಿಕಲರಿಗೆ ವಿಶೇಷ ಕೊಠಡಿಗಳನ್ನು ಪರೀಕ್ಷೆ ಬರೆಯಲು ನೆಲಮಹಡಿಯಲ್ಲಿಯೇ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.


Spread the love

Leave a Comment

error: Content is protected !!