Ganesh Chaturthi ಗಣೇಶ ಚತುರ್ಥಿಗೆ ಸಿದ್ದವಾಗುತ್ತಿರುವ ಗಣಪತಿ ಮೂರ್ತಿಗಳು
ಇಳಕಲ್ : ಸೆಪ್ಟೆಂಬರ್ ೭ ರಂದು ನಡೆಯಲಿರುವ ಗಣೇಶ ಚತುರ್ಥಿಗೆ ಗಣಪತಿ ಮೂರ್ತಿಗಳನ್ನು ಸಿದ್ದಪಡಿಸುವ ಕಾರ್ಯ ಭರದಿಂದ ನಡೆದಿದೆ.
ನಗರದಲ್ಲಿ ಸುಮಾರು ಹತ್ತಾರು ಕಡೆಗೆ ಗಣೇಶ ಮೂರ್ತಿಗಳ ತಯಾರಿಯನ್ನು ಹಲವಾರು ಕಲಾಕಾರರು ಮಾಡುತ್ತಿದ್ದಾರೆ ನಗರಸಭೆ
ಅಧಿಕಾರಿಗಳ ಸಲಹೆಯ ಮೇರೆಗೆ ಹೆಚ್ಚಾಗಿ ಕಲಾವಿದರು ಜೇಡಿಮಣ್ಣಿನ ಗಣಪತಿ ವಿಗ್ರಹಗಳನ್ನು ಸಿದ್ದಪಡಿಸುತ್ತಿರುವದಾದರೂ ಕೆಲವರು
ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳ ತಯಾರಿಕೆಯನ್ನು ಕದ್ದು ಮುಚ್ಚಿ ಮಾಡುತ್ತಿದ್ದಾರೆ. ಅಂತಹ ವಿಗ್ರಹಗಳನ್ನು ನಗರಸಭೆ ಮುಟ್ಟುಗೋಲು
ಹಾಕಿಕೊಳ್ಳುವ ಎಚ್ಚರಿಕೆ ನೀಡಿದ್ದರೂ ಕೆಲವರು ಅದನ್ನು ಬಿಟ್ಟಿಲ್ಲ .
ನಗರದಲ್ಲಿ ಚಿತ್ರಗಾರ ಮನೆತನ ಕಳೆದ ನೂರಾರು ವರ್ಷಗಳಿಂದ ಗಣೇಶ ವಿಗ್ರಹಗಳನ್ನು ಸಿದ್ದಪಡಿಸುತ್ತಿದ್ದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ವಿಜೇತ ರಮೇಶ ಚಿತ್ರಗಾರ ಈ ಬಾರಿಯೂ ಕುಟುಂಬದ ಸದಸ್ಯರೊಂದಿಗೆ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.