ಸಂಭ್ರಮದಿಂದ ಜರುಗಿದ ಗವಿ ಮಹಾಲಿಂಗೇಶ್ವರ ರಥೋತ್ಸವ
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಸುಕ್ಷೇತ್ರ ಗವಿ ಮಹಾಲಿಂಗೇಶ್ವರ ದೇಗುಲದ ರಥೋತ್ಸವ ಆಗಿ ಹುಣ್ಣಿಮೆಯ ದಿನವಾದ ಗುರುವಾರದಂದು ಸಂಜೆ ಸಡಗರ ಸಂಭ್ರಮದಿಂದ ನಡೆಯಿತು.
ಮುಂಜಾನೆ ಮಹಾಲಿಂಗಶ್ವರನಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಜರುಗಿತು. ಸಾಯಂಕಾಲ ಪಲ್ಲಕ್ಕಿ ಉತ್ಸವ ಜರುಗಿತು.
ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮದಿಂದ ರಥೋತ್ಸವನ್ನು ಎಳೆದು ತಮ್ಮ ಭಕ್ತಿಯನ್ನು ಅರ್ಪಿಸಿದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)