ತಾಂತ್ರಿಕ ಕೌಶಲ್ಯ ಪಡೆಯಲು ಜಿಟಿಟಿಸಿ ಕಾಲೇಜಿಗೆ ಪ್ರವೇಶ ಪಡೆಯಿರಿ : ಶಾಸಕ ವಿಜಯಾನಂದ ಕಾಶಪ್ಪನವರ್
ಹುನಗುಂದ : ಕೂಡಲಸಂಗಮದಲ್ಲಿ ಮಾಜಿ ಸಚಿವರಾದ ದಿವಂಗತ ಎಸ್ ಆರ್ ಕಾಶಪ್ಪನವರ ಪರಿಶ್ರಮದಿಂದ ೨೦೦೦ ನೆಯ ಇಸವಿಯಲ್ಲಿ ಸ್ಥಾಪಿತವಾಗಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ವಿಶಿಷ್ಟ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದ್ದು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಜಿಟಿಟಿಸಿ ಡಿಪ್ಲೋಮಾ ಕೋರ್ಸ್ ಮುಗಿಸಿ ನೇರವಾಗಿ ಇಂಜಿನಿಯರಿAಗ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು, ನೇರವಾಗಿ ಎರಡನೇ ವರ್ಷಕ್ಕೆ ಪ್ರವೇಶವನ್ನು ಪಡೆಯಬಹುದು ಹಾಗೂ ಈ ಕೋರ್ಸನ್ನು ಮುಗಿಸಿದವರಿಗೆ ಉದ್ಯೋಗಾವಕಾಶಗಳ ವಿಪುಲ ಸೌಲಭ್ಯವಿದ್ದು ಇಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳ ಕೌಶಲ್ಯ ಶ್ರೇಷ್ಠತೆಯಿಂದಾಗಿ ವಿದೇಶಗಳಲ್ಲಿ ಕೂಡ ಉದ್ಯೋಗದ ಅವಕಾಶಗಳಿವೆ. ಆದ್ದರಿಂದ ೧೦ನೇ ತರಗತಿ ತೇರ್ಗಡೆಯಾಗಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಾಂಶುಪಾಲರು ಜಿಟಿಟಿಸಿ ಕಾಲೇಜು ಕೂಡಲಸಂಗಮ ಇವರನ್ನು ಸಂಪರ್ಕಿಸಿ ಪ್ರವೇಶ ಪಡೆದು ತಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಂಬAಧಿತ ಪಾಲಕರಿಗೆ ವಿದ್ಯಾರ್ಥಿ, ವಿದ್ಯಾರ್ಥಿ ನಿಯರಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ್ ವಿನಂತಿಸಿದ್ದಾರೆ.
ಸಂಬAಧಿತ ಪ್ರೌಢಶಾಲೆಗಳ ಮುಖ್ಯ ಗುರುಗಳು ಎಸ್ ಎಸ್ ಎಲ್ ಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಈ ಮಾಹಿತಿ ನೀಡಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸುರೇಶ ರಾಠೋಡ 9902556110 ಪ್ರಾಂಶುಪಾಲರು ಜಿಟಿಟಿಸಿ ಕೂಡಲ ಸಂಗಮ