ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ತಿರುಗಿದ ವ್ಯಕ್ತಿಯೋರ್ವನಿಗೆ ಧರ್ಮ ದೇಟು
ಇಳಕಲ್ : ಬುರ್ಖಾ ಧರಿಸಿಕೊಂಡು ಬಗಲಲ್ಲಿ ಹಾಕಿದ ಚೀಲದಲ್ಲಿ ಚಾಕು ಚೂರಿ ಕುಡಗೋಲು ಹಾಕಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಜನರು ಹಿಡಿದು ವಿಚಾರಿಸಿ ಧರ್ಮದೇಟು ನೀಡಿದ ಪ್ರಸಂಗ ಶುಕ್ರವಾರದಂದು ನಡೆದಿದೆ.
ಸುಮಾರು ೩೫ ರಿಂದ ೪೦ ವಯಸ್ಸಿನ ಈ ವ್ಯಕ್ತಿ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಎಸಿಓ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹತ್ತಿರ ತಿರುಗುತ್ತಿದ್ದಾಗ ಜನರಿಗೆ ಅನುಮಾನ ಬಂದು ಬುರ್ಖಾ ತೆಗೆದು ವಿಚಾರಣೆ ಮಾಡಿದರೂ ಆ ವ್ಯಕ್ತಿ ಬಾಯಿ ಬಿಡದೇ ಹೋದಾಗ ಎಲ್ಲರೂ ಸೇರಿ ಹಾಕಿಕೊಂಡು ಬಡಿದಿದ್ದಾರೆ ನಂತರ ಪೋಲಿಸ್ ಠಾಣೆಗೆ ಮೊಬೈಲ್ ಹಚ್ಚಿ ಪೋಲಿಸರನ್ನು ಕರೆಸಿ ಅವರ ವಶಕ್ಕೆ ಕೊಟ್ಟಿದ್ದಾರೆ.
ಪೋಲಿಸ್ ಠಾಣೆಯಲ್ಲಿ ಬಾಯಿಬಿಟ್ಟ ವ್ಯಕ್ತಿ ತಾನು ವೀರಾಪೂರ ಗ್ರಾಮದ ಮಹಾಂತೇಶ ಎಂದು ಹೇಳಿದ್ದಾನೆ. ಅವನನ್ನು ಪೋಲಿಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ