ಇಳಕಲ್ ನಗರದಲ್ಲಿ ಮನೆಯ ಹಿಂಬದಿ ಬೀಗ ಮುರಿದು 13.40 ಲಕ್ಷ ರೂ ಮೌಲ್ಯದ ಚಿನ್ನ – ಬೆಳ್ಳಿ ಕಳ್ಳತನ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ವಿಜಯನಗರ ಕಾಲೋನಿಯ ಸ್ಪಂದನ ವಿಜ್ಞಾನ ಪದವಿಪೂರ್ವ ಕಾಲೇಜಿನ ಹತ್ತಿರದ ಮನೆಯಲ್ಲಿ ಹಾಡು ಹಗಲೇ ನುಗ್ಗಿದ ಕಳ್ಳರು 13 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಮೂಲತಃ ಧಾರವಾಡ ಊರಿನ ಬೆಂಗಳೂರು ಐಟಿ ಕಂಪನಿಯ ಉದ್ಯೋಗಿ ರಾಘವೇಂದ್ರ ಬನವಾಸಿ ಕಳೆದ ಎರಡು ತಿಂಗಳಿನಿAದ ಇಳಕಲ್ ನಲ್ಲಿ ವಾಸವಾಗಿದ್ದಾರೆ. ಶನಿವಾರದಂದು ಮುಂಜಾನೆ ಮಗಳನ್ನು ಹೊರಗೆ ಬಿಡಲು ಹೋದಾಗ ಕಳ್ಳರು ಮನೆಗೆ ಹಿಂಬಾಗಲು ಒಡೆದು ಒಳಹೊಕ್ಕು ಮನೆಯಲ್ಲಿದ್ದ 12 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನವನ್ನು ಮತ್ತು 1 ಲಕ್ಷ ರೂ ಮೌಲ್ಯದ ಬೆಳ್ಳಿಯನ್ನು ಎಗರಿಸಿಕೊಂಡು ಹೋಗಿದ್ದಾರೆ.
ಸುದ್ದಿ ತಿಳಿದ ಪಿಎಸ್ ಐ ಸೋಮೇಶ ಗೆಜ್ಜಿ ಸ್ಥಳಕ್ಕೆ ಧಾವಿಸಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಬಾಗಲಕೋಟಯಿಂದ ಬೆರಳಚ್ಚು ತಜ್ಞರನ್ನು ಕರೆಸಿ ಕಳ್ಳರ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.