Government employees’ demand for release of Seventh Pay Commission report ಏಳನೇ ವೇತನ ಆಯೋಗದ ವರದಿ ಜಾರಗೊಳಿಸಲು ಸರ್ಕಾರಿ ನೌಕರರ ಆಗ್ರಹ

WhatsApp Group Join Now
Telegram Group Join Now
Instagram Group Join Now
Spread the love

 

Government employees' demand for release of Seventh Pay Commission report ಏಳನೇ ವೇತನ ಆಯೋಗದ ವರದಿ ಜಾರಗೊಳಿಸಲು ಸರ್ಕಾರಿ ನೌಕರರ ಆಗ್ರಹ

 

ಏಳನೇ ವೇತನ ಆಯೋಗದ ವರದಿ ಜಾರಿಗೊಳಿಸಲು ಸರ್ಕಾರಿ ನೌಕರರ ಆಗ್ರಹ

ರಾಜ್ಯ ಸರಕಾರವು ೦೭ ನೇ ವೇತನ ಆಯೋಗ ನೀಡಿದ ವರದಿಯನ್ನು ಯಥಾವತ್ತಾಗಿ ಜಾರಿಗೆ ಮಾಡುವುದು,ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು ಹಾಗೂ ನಗದುರಹಿತ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವಂತೆ ಇಳಕಲ್ ಹಾಗೂ ಹುನಗುಂದ ತಾಲೂಕುಗಳ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಹಾಗೂ ಸಂಗಣ್ಣ ಹಂಡಿ ನೇತೃತ್ವದ ಪದಾಧಿಕಾರಿಗಳು,ತಾಲೂಕಿನ ಸರ್ವ ಇಲಾಖೆಗಳ ವೃಂದ ಸಂಘಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸರ್ಕಾರಿ ನೌಕರರ ಸಹಭಾಗಿತ್ವದೊಂದಿಗೆ ಹುನಗುಂದ ಮತಕ್ಷೇತ್ರದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇಲಕಲ್ಲದ ಶಾಸಕರ ಗೃಹ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಹಾಗೂ ಸಂಗಣ್ಣ ಹಂಡಿ, ೦೭ ನೇ ವೇತನ ಆಯೋಗ ನೀಡಿದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸುವುದು,ಈಗಾಗಲೇ ಸರಕಾರ ನೀಡಿರುವ ಶೇ ೧೭% ಮಧ್ಯಂತರ ಪರಿಹಾರದೊಂದಿಗೆ ಆಯೋಗ ನೀಡಿದ ವರದಿಯನ್ನು ಜಾರಿಗೆಗೊಳಿಸುವುದು ಹಾಗೂ ನೌಕರರಿಗೆ ಮಾರಕವಾಗಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಹಾಗೂ ಸರಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ವರ್ಗದವರಿಗೆ ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲು ಮಾನ್ಯ ಸರ್ಕಾರಕ್ಕೆ ಒತ್ತಾಯಿಸಿ ಅಧಿವೇಶನದಲ್ಲಿ ಧ್ವನಿ ಎತ್ತಲು ಮಾನ್ಯ ಶಾಸಕರಿಗೆ ಮನವಿ ಅರ್ಪಿಸಲಾಯಿತು.ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಸರ್ಕಾರಿ ನೌಕರರ ಬೇಡಿಕೆಗಳು ಬಹುದಿನಗಳಿಂದ ಈಡೇರದೇ ಇರುವುದನ್ನು ಗಮನಿಸಲಾಗಿದೆ.೦೬ ನೇ ವೇತನ ಆಯೋಗ ಜಾರಿಗೆ ತಂದಿದ್ದು ನಮ್ಮ ಸರ್ಕಾರವೇ ಅದೇ ರೀತಿ ೦೭ ವೇತನ ಆಯೋಗ ಜಾರಿಗೆ ತರಲಾಗುವುದ ಹಾಗೂ ನಾವು ಚುನಾವಣೆ ಪ್ರಣಾಳಿಕೆಯಲ್ಲಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದು ಅವಶ್ಯವಾಗಿ ನೌಕರರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬೇಡಿಕೆ ಈಡೇರಿಸಲಾಗುವುದು ಎಂದರು.

ಹಾಗೂ ತಾಲೂಕಿನ ಮಾನ್ಯ ದಂಡಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ತಹಶೀಲದಾರರಾದಶ್ರೀ ಎಸ್ ಬಿ ಕೂಡಲಗಿ ರವರಿಗೆ ಸಹ ಮನವಿಯನ್ನು ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಅಧಿಕಾರಿಗಳಾದ ಈಶ್ವರ ಗಡ್ಡಿ,ಮುರಳಿಧರ ದೇಶಪಾಂಡೆ,ಪದಾಧಿಕಾರಿಗಳಾದ ಗುಂಡಪ್ಪ ಕುರಿ,ಆನಂದ ಗದ್ದನಕೇರಿ,ಶರಣು ಕೊಣ್ಣೂರ,,ರಂಗನಾಥ ಮಾಸರಡ್ಡಿ,ಮುತ್ತು ಬೀಳಗಿ,ಸಂಗಮೇಶ ಪಾಟೀಲ,ಸಿದ್ದು ಶೀಲವಂತರ,ಜಿ ಎಸ್ ಅಡವಿ,ಸಿ ಎಸ್ ಚಟ್ಟೇರ,ಜೆ ಜಿ ಗಡೇದ,ಎಸ್ ಕೆ ಬಂಡರಗಲ್,ಮುನ್ನಾ ಬಾಗವಾನ,ಎಸ್ ಜಿ ಬಂಗಾರಿ,ಈರಣ್ಣ ಚಿನಿವಾಲರ,ಅನಿತ್ ನಾಯಕ,ಬಸೀರ ಮುಜಾವರ,ಪಿ ಎಂ ಪಟ್ಟಣಶೆಟ್ಟಿ,ಶ್ರೀಮತಿ ನಯನಾ ಕಾಟವಾ,ಶ್ರೀಮತಿ ಉಮಾ ಮಾರಾ,ಎಸ್ ಎಲ್ ವನಜಕರ,ಶಂಕರ ಲಮಾಣಿ,ಎಂ ಎನ್ ಕಲ್ಮಠ,ಸದಾಶಿವ ಬಾಗಿ,ಭೀಮಣ್ಣ ಹೊಸಮನಿ,ಕುಬೇರ ಹೊಂಗಲ್,ಪೋಲಿಸ್ ಪಾಟೀಲ,ಶಿವಪುತ್ತಪ್ಪ ಕತ್ತಿ,ಜಿ ಟಿ ರಾಠೊಡ ಹಾಗೂ ನೌಕರರ ಸಂಘ,ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು, ಅಪಾರ ಸಂಖ್ಯೆಯ ಸರಕಾರಿ ನೌಕರರು ಭಾಗವಹಿಸಿದ್ದರು.

 


Spread the love

Leave a Comment

error: Content is protected !!