Government’s strict order for drug free day ವ್ಯಸನಮುಕ್ತ ದಿನಾಚರಣೆಗೆ ಸರಕಾರದ ಕಟ್ಟುನಿಟ್ಟಿನ ಆದೇಶ

WhatsApp Group Join Now
Telegram Group Join Now
Instagram Group Join Now
Spread the love

Government's strict order for drug free day ವ್ಯಸನಮುಕ್ತ ದಿನಾಚರಣೆಗೆ ಸರಕಾರದ ಕಟ್ಟುನಿಟ್ಟಿನ ಆದೇಶ

ವ್ಯಸನಮುಕ್ತ ದಿನಾಚರಣೆಗೆ ಸರಕಾರದ ಕಟ್ಟುನಿಟ್ಟಿನ ಆದೇಶ

ಸಮಾಜ ಸುಧಾರಣೆಗಾಗಿ, ನಾಡಿನ ಒಳಿತಿಗಾಗಿ, ಬಸವತತ್ವ ಆಚರಣೆಗಾಗಿ ಜೀವವನ್ನೇ ಸವೆಸಿದ ಡಾ.ಮಹಾಂತ ಶಿವಯೋಗಿಗಳವರ ಜನ್ಮದಿನ ಆ.೧£ ÀÄ್ನ ರಾಜ್ಯಾದ್ಯಂತ ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸಲು ಸರಕಾರ ಜು.೨೨ ರಂದು ಪುನ: ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
೨೦೨೨ ಮೇ.೨೩ ರಂದು ಹೊರಡಿಸಿದ ಆದೇಶದ ಪ್ಯಾರಾ(೧)ನ್ನು ಪರಿಷ್ಕರಿಸಿ ಇಂದಿನ ಹೊಸ ಆದೇಶದಂತೆ ಸರಕಾರ ನೂತನ ಸಮಿತಿಯೊಂದನ್ನು ರಚಿಸಿದ್ದು, ಪ್ರತಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಹಾಗೂ ಜಿಲ್ಲಾ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಅವರನ್ನು ಸದಸ್ಯ ಕಾರ್ಯದರ್ಶಿ ಯನ್ನಾಗಿ ಹಾಗೂ ಜಿ.ಪಂ .ಸಿ.ಇ.ಓ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ಜಿಲ್ಲಾ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ, ಜಿಲ್ಲೆಯ ತಾಲೂಕು ತಹಸೀಲ್ದಾರ್‌ರನ್ನು ಸದಸ್ಯರನ್ನಾಗಿ ಮಾಡಿ ಆದೇಶ ಹೊರಡಿಸಿದೆ.
ಇನ್ನು ಕಾರ್ಯಕ್ರಮ ಆಯೋಜಿಸುವ ಸಲುವಾಗಿ ಜಿಲ್ಲಾ ಮಟ್ಟಕ್ಕೆ ೫೦ ಸಾವಿರ(೩೧ ಜಿಲ್ಲೆಗಳಿಗೆ), ತಾಲೂಕು ಮಟ್ಟಕ್ಕೆ ೧೭ ಸಾವಿರ(೨೩೯ ತಾಲ್ಲೂಕು) ಹಾಗೂ ರಾಜ್ಯಮಟ್ಟಕ್ಕೆ ೩.೮೭ ಲಕ್ಷ ರೂ ದಂತೆ ಒಟ್ಟು ೬೦ ಲಕ್ಷ ಅನುದಾನವನ್ನೂ ನಿಗದಿಪಡಿಸಿದೆ.
ನೂತನ ಆದೇಶದ ಕಾರ್ಯಕ್ರಮದ ಮಾರ್ಗಸೂಚಿಯಂತೆ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರ ಅನಾವರಣ ಮಾಡಿ ಗೌರವ ವಂದನೆ ಅರ್ಪಿಸುವುದು,
ಜಿಲ್ಲೆಯ ಎಲ್ಲ ಇಲಾಖೆಗಳ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಡಿ ಮಧ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿಜಾಥಾ ಹಾಗೂ ಸಮಾರಂಭ ಆಯೋಜಿಸಿ ಶಾಲಾ ಕಾಲೇಜುಗಳ ವದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಜ್ಞರಿಂದ ಭಾಷಣ ಏರ್ಪಡಿಸುವುದು.
ಮಧ್ಯಪಾನದಿಂದಗುವ ದುಷ್ಪರಿಣಾಮಗಳ ವಿವರ ಸಹಿತ ಗಣ್ಯರ ಹೇಳಿಕೆ, ಅಂಕಿ ಅಂಶಗಳೊAದಿಗೆ ಮಾಹಿತಿ ಮುದ್ರಿಸಿ ಸಾರ್ವಜನಿಕರಿಗೆ ಹಾಗೂ ಯುವ ಜನತೆಗೆ ಹಂಚುವುದು. ಪ್ರತಿ ತಾಲೂಕಿನ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಆಹದವಾನಿಸಿ ಜಾಥಾ ನಡೆಸುವುದು, ಭಿತ್ತಿ ಪತ್ರ ಹಾಗೂ ಬಟ್ಟೆ ಫ್ಲೆಕ್ಸ್ ಅಳವಡಿಸುವುದು.
ಸ್ಥಳೀಯ ಪತ್ರಿಕೆಗಳಲ್ಲಿ ಲೇಖನ ಹಾಕುವುದು, ಸಮಾರಂಭಗಳಲ್ಲಿ ಪ್ರತಿಜ್ಞಾವಿಧಿ ಬೋಧಿಸುವುದುಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ವ್ಯಸನಮುಕ್ತ ಶಿಬಿರ ಏರ್ಪಡಿಸುವುದು ಕಡ್ಡಾಯ ಎಂದು ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಜಸಿAತ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು. ಇಂದಿನ ಯುವಕರೇ ನಾಳಿನ ನಾಡಿನ ನಾಯಕರು, ಅವರಿಂದಲೇ ನಾಡಿನ, ದೇಶದ ಭವಿಷ್ಯ. ಆದ್ದರಿಂದ ಶಾಲಾ-ಕಾಲೇಜುಗಳಲ್ಲಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಕುರಿತು ಯುವಕರಲ್ಲಿ ತಿಳುವಳಿಕೆ ಮೂಡಿಸುವ ಮೂಲಕ ಸಮಾಜವನ್ನು ಜಾಗೃತಗೊಳಿಸುವ, ಭವಿಷ್ಯತ್ತಿನ ಬದುಕನ್ನು ರೂಪಿಸಿಕೊಳ್ಳುವ ಯುವಕರಲ್ಲಿ ಪ್ರೇರಣೆ ನೀಡುವ ಪ್ರಾಮಾಣಿಕ ಪ್ರಯತ್ನ ಶಿಕ್ಷಕರು ಮಾಡಬೇಕಿದೆ. ದಯವಿಟ್ಟು ಮಕ್ಕಳಲ್ಲಿ ದುಶ್ಚಟಗಳ ಬಗ್ಗೆ ಅರಿವನ್ನು ಮೂಡಿಸಬೇಕೆಂದು ಶಿಕ್ಷಕರಲ್ಲಿ ವಿನಂತಿಸುತ್ತೇವೆ. ಪೂಜ್ಯ ಶ್ರೀ ಮ.ನಿ.ಪ್ರ. ಗುರುಮಹಾಂತಶ್ರೀಗಳು, ಚಿತ್ತರಗಿ ಶ್ರೀವಿಜಯ ಮಹಾಂತೇಶ ಸಂಸ್ಥಾನಮಠ, ಇಳಕಲ್.


Spread the love

Leave a Comment

error: Content is protected !!