Govt bus stuck in drain ಚರಂಡಿ ಗುಂಡಿಯಲ್ಲಿ ಸಿಲುಕಿಕೊಂಡಸರಕಾರಿ ಬಸ್ : ನಗರಸಭೆ ನಿಲ೯ಕ್ಷ್ಯ
ಇಳಕಲ್ಲ : ಇಲ್ಲಿನ ಸಿದ್ದಾರ್ಥ ಪ್ರೌಢ ಶಾಲೆಯ ಹತ್ತಿರದ ರಾಷ್ಟಿçÃಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದರಿಂದ ಒನ ವೇ ಯಲ್ಲಿ ಬಂದ ಬಾದಾಮಿ ಘಟಕದ ಸರಕಾರಿ ಬಸ್ ಚರಂಡಿಯ ಗುಂಡಿಯಲ್ಲಿ ಸಿಲುಕಿಕೊಂಡು ಘಟನೆ ಸೋಮವಾರ ನಡೆದಿದೆ.
ಹುನಗುಂದ ಮಾರ್ಗವಾಗಿ ಬಂದ್ ಬಸ್ ಇಳಕಲ್ಲ ಬಸ್ ನಿಲ್ದಾಣಕ್ಕೆ ಹೋಗುವ ಸಮಯದಲ್ಲಿ ಈ ಅವಘಡ ನಡೆದಿದೆ, ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರು ಭಯಬೀತಗೊಂಡಿದ್ದರು. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಗುಂಡಿಯಲ್ಲಿ ಸಿಲುಕಿಕೊಂಡ ಬಸ್‌ನ್ನು ಕ್ರೇನ್ ಮುಖಾಂತರ ಹೊರಗಡೆ ತೆಗೆಯಲಾಯಿತು.
ಈ ಮಾರ್ಗದಲ್ಲಿ ಎರಡು ಮೂರು ಕಡೆ ಇಂತಹ ಗುಂಡಿಗಳು ಇದ್ದು, ನಗರಸಭೆಯ ಅಧಿಕಾರಿಗಳು ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತಿದ್ದಾರೆ.
ಇದೇ ರೀತಿ ನಗರದ ಪಶು ಆಸ್ಪತ್ರೆಯ ಹತ್ತಿರದ ಚೋಳಪ್ಪ ಇಂಡಿ ಅವರ ಮನೆಯ ಹತ್ತಿರದ ಸಹ ಇದ್ದು ದುರಸ್ಥಿ ಕಾರ್ಯವನ್ನು ಮಾಡಿ ಎಂದು ಗಮನಕ್ಕೆ ತಂದರೂ ಕೂಡ ದುರಸ್ಥಿ ಕಾರ್ಯವನ್ನು ಮಾಡದೇ ನಿರ್ಲಕ್ಷö್ಯತನವನ್ನು ತೋರುತ್ತಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ರೀತಿ ಪ್ರಾಣಾಹಾನಿಯಾದರೆ ಅದಕ್ಕೆ ನಗರಸಭೆಯೇ ಹೊಣೆಯನ್ನು ಹೊರಬೇಕು ಎಂದು ಸಾರ್ವಜನಿಕರು ಪರವಾಗಿ ಪಬ್ಲಿಕ್ ಟೈಮ್ಸ್ ನ್ಯೂಸ್ ಆಗ್ರಹಿಸುತ್ತಿದೆ.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)






