ಬಡ ಕಲಾವಿದರಿಗೆ ಸರ್ಕಾರದಿಂದ ನಿವೇಶನ ಒದಗಿಸಬೇಕು: ಗಂಗಮ್ಮ ಆರೇರ
ಇಳಕಲ್: ನಮ್ಮ ಇಳಕಲ್ ನಗರದಲ್ಲಿ ಯಾವ ನಾಟಕಗಳು ಯಶಸ್ವಿಯಾಗುತ್ತಿದ್ದವೋ ಅವು ಇಡೀ ರಾಜ್ಯಾದ್ಯಂತ ಯಶಸ್ವಿಯಾಗುತ್ತವೆ ಎಂಬ ನಂಬಿಕೆ ಇಡೀ ವೃತ್ತಿಪರ ರಂಗಭೂಮಿ ಕಲಾವಿದರಲ್ಲಿ ಇಂದಿಗೂ ಇದೆ ಎಂದು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಹಾದೇವ ಕಂಬಾಗಿ ಹೇಳಿದರು.
ನಗರದ ರಂಗಸAಗಮ ಕಲೆ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ೨೦೨೪ರ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರಾದ ಗಂಗಮ್ಮ ಆರೇರ ಮತ್ತು ಮಹಾದೇವ ಕಂಬಾಗಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಪರ ಮಾತನಾಡಿದ ಮಹದೇವ ಕಂಬಾಗಿ ಅವರು ಆಧುನಿಕ ಸನಿಮಾ, ಧಾರವಾಹಿ, ಕಿರು ಚಿತ್ರಗಳ ಭರಾಟೆಯಲ್ಲಿಯೂ ರಂಗಭೂಮಿ ಇನ್ನೂ ಜೀವಂತವಾಗಿದೆ ಎಂದರೆ ಅದಕ್ಕೆ ನಾಟಕ ಪ್ರೇಮಿಗಳು ಕಾರಣ, ಅದರಲ್ಲೂ ಇಳಕಲ್ ನಗರ ಕಲಾವಿದರ ತವರೂರಾಗಿದೆ ಎಂದರು.
ಕಲಾವಿದೆ ಗಂಗಮ್ಮ ಆರೇರ ಮಾತನಾಡಿ ನನ್ನಂತ ತೀರಾ ಬಡ ಕಲಾವಿದೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿರುವುದು ಸಂತೋಷದ ಸಂಗತಿಯಾಗಿದ್ದು, ಸರ್ಕಾರದ ವತಿಯಿಂದ ಬಡ ಕಲಾವಿದರಿಗೆ ಉಚಿತ ನಿವೇಶನ ಒದಗಿಸುವ ಕೆಲಸವಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಲಾವಿದೆ ರೇಷ್ಮಾ ಅಳವಂಡಿ ವಹಿಸಿದ್ದರು, ಭಾರತಿ ದಾವಣಗೇರಿ. ಉಮಾರಾಣಿ ಬಾರಿಗಿಡದ. ಸಲೀಂ ಮುದಗಲ,ಬಲವಂತ ಗೌಡ, ಪಾಟೀಲ,ಮುರ್ತುಜಾ ಗಟ್ಟಿಗನೂರ, ಬೇಗಂ ಜಂಗಿ, ಎಸ್.ಎಂ ಕಂದಗಲ, ಸುಲೇಮಾನ ಚೋಪದಾರ,ಹಾಗೂ ಇಳಕಲ್ಲನ ರಂಗಭೂಮಿ ಕಲಾವಿದರು ಉಪಸಿತರಿದ್ದರು.
ಕಸ್ತೂರಿಬಾಯಿ ಮೇರವಾಡೆ, ಜ್ಯೋತಿ ಚಲವಾದಿ ಪ್ರಾರ್ಥಿಸಿದರು, ರಹಮಾನ ಬೂವಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಹುಸೇನಸಾಬ ಮುದಗಲ್ಲ ನಿರೂಪಿಸಿದರು.