Ayyappa Swami Seva ಅಯ್ಯಪ್ಪ ಸ್ವಾಮಿ ಸೇವಾ ಸಂಸ್ಥೆ ವತಿಯಿಂದ ನಗರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸತ್ಕಾರ
ಇಳಕಲ್ : ನಗರಸಭೆಗೆ ನೂತನ ಅಧ್ಯಕ್ಷೆ ಸುಧಾರಾಣಿ ಸಂಗಮ್ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಇವರನ್ನು ಅಯ್ಯಪ್ಪ ಸ್ವಾಮಿ ಸೇವಾ ಸಂಸ್ಥೆ ವತಿಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಾಯಂಕಾಲ ನಡೆದ ಸರಳ ಸಮಾರಂಭದಲ್ಲಿ ಗೌರವಿಸಿ ಸತ್ಕರಿಸಲಾಯಿತು.
ಈ ಸಮಯದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್ ಮಾತನಾಡಿ ನಗರದ ಅಭಿವೃದ್ಧಿ ಶ್ರಮಿಸುವುದಾಗಿ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಕಟಗಿ, ಉಪಾಧ್ಯಕ್ಷ ರಾಘವೇಂದ್ರ ಪೇರಮಾಳ,
ಕಾರ್ಯದರ್ಶಿ ಮಹಾಂತೇಶ್ ಜವಳಗೇರಿ, ಖಜಾಂಚಿ ಸಿದ್ದಣ್ಣ ಘಂಟಿ, ಸದಸ್ಯರಾದ ಮಹಾಂತೇಶ ರಾಠೋಡ್,
ಅಂಬಣ್ಣ ಚಲವಾದಿ, ಶಿವಪ್ಪ ಕುಂಬಾರ್, ಮಾರುತಿ ಕಿಡದೋರ್, ಬಸವರಾಜ್ ಕಮಗೋಳಿ, ಜಗದೀಶ್ ಬಲವಂತಪ್ಪನವರ್,
ಅಂಬರೀಶ್ ಬಲವಂತಪ್ಪನವರ್, ಶಂಕರ್ ಪೂಜಾರ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಸ್ಥೆ ಸಲಹಾ ಸಮಿತಿ ಅಧ್ಯಕ್ಷ ಬಸವಂತ
ರಾವ್ ದೇಸಾಯಿ ಉಪಾಧ್ಯಕ್ಷ ಕೆ ಚೆನ್ನಪ್ಪ , ಕಾರ್ಯದರ್ಶಿ ಯುವರಾಜ್ ಚಲವಾದಿ,
ಸದಸ್ಯರಾಗಿರುವಂತ ದೇವಪ್ಪ ಆಲೂರ್ ಇನ್ನು ಹಲವಾರು ಗಣ್ಯರು ಉಪಸ್ಥಿತರಿದ್ದರು.