rain ಮಳೆಗಾಗಿ ಇಳಕಲ್ ನಗರದಲ್ಲಿ ಗುರ್ಜಿ ಪ್ರಾರ್ಥನೆ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಕುಂಚಿಕೊರವರ ಸಮಾಜದ ಮಹಿಳೆಯರು ಬೇಗನೆ ಮಳೆ ಬರಲಿ ಎಂದು ಮಕ್ಕಳ ಮೇಲೆ ಗುರ್ಜಿಯನ್ನು ಇಟ್ಟು ಪ್ರಾರ್ಥನೆಯನ್ನು ಮನೆ ಮನೆಗಳಿಗೆ ಹೋಗಿ ಪೂಜೆಯನ್ನು ರವಿವಾರದಂದು ಸಲ್ಲಿಸಿದರು.
ಮಳೆರಾಯನ ಆಗಮನಕ್ಕಾಗಿ ಪ್ರಾರ್ಥಿಸಿ ಗುರ್ಜಿ ಪಾರಂಪರಿಕ ಆಚರಣೆಯನ್ನು ಕೈಗೊಂಡ ಇಲ್ಲಿಯ ಮಹಿಳೆಯರಾದ ದುರಗಮ್ಮ ಕೊಪ್ಪಳ,ಲಕ್ಷ್ಮೀ ಮುದಗಲ್ , ದುರಗಮ್ಮ ನರೇಗಲ್, ಸಣ್ಣದುರಗಮ್ಮ ಕೊಪ್ಪಳ.ಸುಂಕಮ್ಮ ಮುದಗಲ್. ದುರಗಮ್ಮ ಮುದಗಲ್ ಕೂಡಿಕೊಂಡು ಬಾಲಕರಾದ ಅರ್ಜುನ್ ಮುದಗಲ್ಲ, ದುರ್ಗೇಶ್ ಮುದಗಲ್ಲ ಎಲ್ಲರೂ ದೇವಿ ಸುಂಕಲಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಕೈಗೊಂಡು ಗುರ್ಜಿಗೆ ಪೂಜಿಸಿ ಮಳೆರಾಯನ ಆಶೀರ್ವಾದಕ್ಕೆ ಬೇಡಿಕೊಂಡರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ