ಹನುಮ ಜಯಂತಿ : ನೂರಾರು ಹನುಮ ಭಕ್ತರು ಪಾದಯಾತ್ರೆ
ಇಳಕಲ್ಲದ ಹಿಂದೂ ಜಾಗರಣಾ ಸಮಿತಿಯ ವತಿಯಿಂದ ಹನುಮ ಜಯಂತಿ ಅಂಗವಾಗಿ ಮಂಗಳವಾರದAದು ಮುಂಜಾನೆ ೬ ಗಂಟೆಗೆ ತಾಲೂಕಿನ ಕೊನೆಯ ಹಳ್ಳಿ ಹೊಸೂರ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಿದರು.
ನಗರದ ಶ್ರೀರಾಮ ಮಂದಿರದಿAದ ನೂರಾರು ಹನುಮ ಭಕ್ತರು ಶುಭ್ರ ಬಿಳಿ ವಸ್ತ್ರಗಳನ್ನು ಧರಿಸಿ ಹೆಗಲಿಗೆ ಕೇಸರಿ ಶಾಲು ಹಾಕಿಕೊಂಡು ಹತ್ತು ಕಿಲೋ ಮೀಟರ್ ದೂರದ ದೇವಸ್ಥಾನಕ್ಕೆ ಪಾದಯಾತ್ರೆ ಬೆಳೆಸಿದರು.
ಶ್ರೀರಾಮ ಮತ್ತು ಹನುಮನ ಜಯಘೋಷವನ್ನು ಮಾಡುತ್ತಾ ಬಾಲಕಿಯರು ಸೇರಿದಂತೆ ಮಹಿಳೆಯರು ಪಾದಯಾತ್ರೆ ಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಂತರ ಹೊಸೂರು ಗ್ರಾಮದಲ್ಲಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಹನುಮ ಭಜನೆಯನ್ನು ಮಾಡಿದರು. ಈ ಭಜನೆಯಲ್ಲಿ ಯುವ ನಾಯಕ ರಾಜುಗೌಡ ಪಾಟೀಲ ಭಾಗಿಯಾಗಿದ್ದರು.