Heavy rain in Ilakal city: overflowing ditches ಇಳಕಲ್ ನಗರದಲ್ಲಿ ಭಾರೀ ಮಳೆ : ತುಂಬಿ ಹರಿದ ಹಳ್ಳ ಕೊಳ್ಳಗಳು

WhatsApp Group Join Now
Telegram Group Join Now
Instagram Group Join Now
Spread the love

Heavy rain in Ilakal city: overflowing ditches ಇಳಕಲ್ ನಗರದಲ್ಲಿ ಭಾರೀ ಮಳೆ : ತುಂಬಿ ಹರಿದ ಹಳ್ಳ ಕೊಳ್ಳಗಳು

 

 

ಇಳಕಲ್ ನಗರದಲ್ಲಿ ಭಾರೀ ಮಳೆ : ತುಂಬಿ ಹರಿದ ಹಳ್ಳ ಕೊಳ್ಳಗಳು

 

ಬಾಗಲಕೋಟ : ಜಿಲ್ಲೆಯ ಇಳಕಲ್ ನಗರದಲ್ಲಿ ರವಿವಾರ ರಾತ್ರಿ ಸುರಿದ ಭಾರೀ ಮಳೆಗೆ ನಗರದಲ್ಲಿನ ಹಳ್ಳ ಕೊಳ್ಳಗಳು ತುಂಬಿ ಹರಿದಾಡಿದ ವರದಿಗಳು ಬಂದಿವೆ. ಹೌದು ಸುಮಾರು 2 ಗಂಟೆಗಳ ಮೇಲೆ ಸುರಿದ ಮಳೆಯಿಂದಾಗಿ ನಗರದ ತೆಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.

Heavy rain in Ilakal city: overflowing ditches ಇಳಕಲ್ ನಗರದಲ್ಲಿ ಭಾರೀ ಮಳೆ : ತುಂಬಿ ಹರಿದ ಹಳ್ಳ ಕೊಳ್ಳಗಳು          ನಗರದ ಕಾಮತ್ ಹೋಟೆಲ್ ಪಕ್ಕದ ವಾಣಿಜ್ಯ ಸಂಕೀರ್ಣದ ಕೆಳ್ಳ ಮಹಡಿಯಲ್ಲಿ ನೀರು ತುಂಬಿಕೊಂಡಿವೆ. ಮುಂಜಾನೆ ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನೀರನ್ನು ಹೊರ ತೆಗೆದು ನೀರು ಹೋಗುವಂತೆ ಜೆಸಿಬಿ ಮೂಲಕ ಕಾರ್ಯವನ್ನು ನಡೆಸಿದರು.

 

Heavy rain in Ilakal city: overflowing ditches ಇಳಕಲ್ ನಗರದಲ್ಲಿ ಭಾರೀ ಮಳೆ : ತುಂಬಿ ಹರಿದ ಹಳ್ಳ ಕೊಳ್ಳಗಳು

ಅದರಂತೆ ಚರಂಡಿಗಳಲ್ಲಿ ಹಾಳು ಮಣ್ಣು ಕಸ ಕಡ್ಡಿಗಳಿಂದ ತುಂಬಿಕೊಂಡಿದ್ದರಿಂದ ಮಳೆ ನೀರು ಮುಂದೆ ಸಾಗದೇ ರಸ್ತೆಗಳ ಮೇಲೆ ಹರಿದಾಡಿವೆ. ಚರಂಡಿಗಳನ್ನು ಸಹ ನಗರಸಭೆ ಸಿಬ್ಬಂದಿಗಳು ಮುಂಜಾನೆ ಸ್ವಚ್ಚತಾ ಕಾರ್ಯವನ್ನು ನಡೆಸಿದ್ದಾರೆ.    ಒಟ್ಟಾರೆ ನಗರದಲ್ಲಿ ಉತ್ತಮ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದ್ದು. ಬಿತ್ತನೆ ಕಾರ್ಯಗಳಿಗೆ ಅನುಕೂಲ ಮಾಡಿಕೊಟ್ಟಿದೆ.

ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)

 


Spread the love

Leave a Comment

error: Content is protected !!