cane ಭಾರೀ ಗಾಳಿ – ಮಳೆಗೆ ನೆಲಕಚ್ಚಿದ ಕಬ್ಬು ಬೆಳೆ
ಇಳಕಲ್ಲ : ತಾಲೂಕಿನ ಕಂದಗಲ್ಲ ಗ್ರಾಮದ ಗೋತಗಿ ರಸ್ತೆಗೆ ಹೊಂದಿಕೊAಡಿರುವ ಸರ್ವೇ ನಂ ೨೭೩/೪ ರ ಹಸನಸಾಬ ಪಿಂಜಾರ
ಎಂಬ ರೈತರ ಹೊಲದಲ್ಲಿ ಕಬ್ಬಿನ ಬೆಳೆ ಅರ್ಧಕ್ಕಿಂತ ಹೆಚ್ಚು ಹಾನಿಯಾಗಿದೆ.
ಇತ್ತೀಚಿಗೆ ಸುರಿದ ಭಾರಿ ಮಳೆಗೆ ಹಾಗೂ ಸುಳಿಗಾಳಿಗೆ ಸಿಕ್ಕು ಬೆಳೆದು ನಿಂತ ೫ ಎಕರೆ ೪ ಗುಂಟೆ ಜಮೀನಿನಲ್ಲಿ ಬೆಳೆಯ
ಅಂದಾಜು ಅರ್ಧದಷ್ಟು ನೆಲಕ್ಕೆ ಬಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಸಾಲ ಮಾಡಿ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಿ, ಈ ಸಲದ ಭೀಕರ ಬಿರು ಬಿಸಿಲಿನಲ್ಲಿಯೂ ಶಿಶು ಮಕ್ಕಳಂತೆ
ಜೋಪಾನ ಮಾಡುವ ರೀತಿಯಲ್ಲಿ ಈ ಕಬ್ಬಿನ ಬೆಳೆಯನ್ನು ಬೆಳೆಸಿ ಇನ್ನೇನು ಎರಡೂ ಮೂರು ತಿಂಗಳಲ್ಲಿ
ಸಂಪೂರ್ಣ ಫಸಲು ಪಡೆದುಕೊಳ್ಳುತ್ತಿದ್ದ ರೈತ ಈಗ ಚಿಂತಾಕ್ರಾAತನಾಗಿದ್ದಾನೆ.
ತಮ್ಮ ಜೀವನವನ್ನೇ ಕೃಷಿಗಾಗಿ ಮೂಡಪಿಟ್ಟ ಕುಟುಂಬ ಹೊಲದಲ್ಲಿಯೇ ಮನೆ ಮಾಡಿ ದನಕರುಗಳನ್ನು
ಸಾಕಿ ಕೃಷಿಯನ್ನೇ ಅವಲಂಬಿಸಿದ ರೈತನಿಗೆ ಈಗ ದಿಕ್ಕೇ ತೋಚದಂತಾಗಿದೆ.
*ಈ ಕೂಡಲೇ ಸಂಬAದಪಟ್ಟ ಇಲಾಖೆಯವರು ಈ ಹೊಲಕ್ಕೆ ಭೇಟಿ ನೀಡಿ ವಸ್ತು ಸ್ಥಿತಿಯನ್ನು ಅರಿತು ಸರಕಾರದಿಂದ ಸಿಗುವ ಎಲ್ಲ ಸೌಲಭ್ಯ ಹಾಗೂ ಪರಿಹಾರ ಒದಗಿಸಿಕೊಡಬೇಕು : ಗುರು ಗಾಣಿಗೇರ ರೈತ ಸಂಘದ ತಾಲೂಕ ಕಾರ್ಯಧ್ಯಕ್ಷ.
* ಇಡೀ ಕುಟುಂಬ ವರ್ಗದವರು ಕಬ್ಬಿನ ಬೆಳೆಯನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸಿದ್ದೇವು ಆದರೆ ಸುರಿದ ಭಾರೀ ಮಳೆಗೆ ಫಸಲು ನೆಲ ಕಚ್ಚಿ ಬಿದ್ದಿದ್ದು ಮನಸ್ಸಿಗೆ ನೋವುಂಟು ಮಾಡಿದೆ- ಹಸನಸಾಬ ಪಿಂಜಾರ