Hemareddy Mallamma Jayanti ನಂದವಾಡಗಿ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಮಹಿಳೆಯರಿಂದ ಕುಂಭ ಮೆರವಣಿಗೆ
ಬಾಗಲಕೋಟ : ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ನಂದವಾಡಗಿ ಹಾಗೂ ಹರಿಣಾಪೂರ ರೆಡ್ಡಿ ಸಮಾಜದ ವತಿಯಿಂದ ಶ್ರೀಮಹಾಶಿವರಣೆ ಹೇಮರಡ್ಡಿ ಮಲ್ಲಮ್ಮನವರ ೬೦೨ ನೇ ಜಯಂತ್ಯೋತ್ಸವ ಶುಕ್ರವಾರದಂದು ನಡೆಯಿತು.
ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರದ ಮೆರವಣಿಗೆ ಹಾಗೂ ಮಹಿಳೆಯರ ಕುಂಭ ಮೆರವಣಿಗೆಗೆ ನಂದವಾಡಗಿ ಶ್ರೀಮಠದ ಡಾ.ಚನ್ನಬಸವದೇಶಿಕೇಂದ್ರ ಮಹಾಸ್ವಾಮಿಗಳು ಚಾಲನೆ ನೀಡಿದರು.
ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯ ನೇತೃತವನ್ನು ಸಮಾಜದ ಹಿರಿಯರು ಮುಖಂಡರು ವಹಿಸಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)