Hescom office besieged ರೈತರಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ
ಮುದ್ದೇಬಿಹಾಳ : ಹಲವು ತಿಂಗಳಿAದ ಬೇಡಿಕೊಂಡರೂ ವಿದ್ಯುತ್ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ತೋರಿಸುತ್ತಿರುವ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ಧಾರಿತನ ಖಂಡಿಸಿ ಕೃಷ್ಣಾ ನದಿ ತೀರದ ಕಂದಗನೂರ ಮತ್ತು ಸುತ್ತಲಿನ ಗ್ರಾಮಸ್ಥರು ಇಲ್ಲಿನ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಸಿಬ್ಬಂದಿ ಹೊರಗೆ ಹಾಕಿ ಬೀಗ ಜಡಿದು ಪ್ರತಿಭಟಿಸಿದ ಘಟನೆ ಬುಧವಾರದಂದು ನಡೆದಿದೆ.
ಗ್ರಾಮದಲ್ಲಿ ಶುದ್ದ ನೀರು ಸಿಗದ ಕಾರಣ ಸಿಕ್ಕ ಸಿಕ್ಕ ನೀರು ಕುಡಿದು ವಾಂತಿ ಭೇದಿ ಹೆಚ್ಚಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಟಿಸಿ ಸುಟ್ಟು ಮೂರು ತಿಂಗಳಾದರೂ ದುರಸ್ಥಿ ಮಾಡಿಲ್ಲ ಎಂದೆಲ್ಲ ದೂರಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಎಇಇ ರಾಜಶೇಖರ ಹಾದಿಮನಿ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಆಕ್ರೋಶ ಮುಂದುವರೆದಿದೆ. ಸಮಸ್ಯೆಗೆ ಪರಿಹಾರ ಸಿಗುವ ತನಕ ಹೋರಾಟ ಕೈ ಬಿಡಿವುದಿಲ್ಲ, ಕಚೇರಿಗೆ ಹಾಕಿದ ಬೀಗವನ್ನೂ ತೆರವುಗೊಳಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಹೋರಾಟ ನಡೆಸಿದ್ದಾರೆ.