Horrible accident while coming for worship: pregnant woman diesಪೂಜೆ ಸಲ್ಲಿಸಿ ಬರುವಾಗ ಭೀಕರ ಅಪಘಾತ: ಗರ್ಭಿಣಿ ಸಾವು

WhatsApp Group Join Now
Telegram Group Join Now
Instagram Group Join Now
Spread the love

Horrible accident while coming for worship: pregnant woman diesಪೂಜೆ ಸಲ್ಲಿಸಿ ಬರುವಾಗ ಭೀಕರ ಅಪಘಾತ: ಗರ್ಭಿಣಿ ಸಾವು

ಪೂಜೆ ಸಲ್ಲಿಸಿ ಬರುವಾಗ ಭೀಕರ ಅಪಘಾತ: ಗರ್ಭಿಣಿ ಸಾವು

ಬೆಂಗಳೂರು \ ನೆಲಮಂಗಲ: ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಆಗುತ್ತಿದ್ದ ವೇಳೆ ತುಂಬು ಗರ್ಭಿಣಿ ಹಾಗೂ ಆಕೆಯ ಗರ್ಭದಲ್ಲಿದ್ದ

೮ ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ

ಜಿಲ್ಲೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ನಡೆದಿದೆ.

ಎಡೇಹಳ್ಳಿಯ ಸಿಂಚನಾ (೩೦) ಮೃತಪಟ್ಟವರಾಗಿದ್ದಾರೆ. ಸಿಂಚನ ತುಂಬು ಗರ್ಭಿಣಿಯಾಗಿದ್ದು.

ಹೆರಿಗೆ ಸುಸೂತ್ರವಾಗಿ ನಡೆಯಲಿ ಎಂದು ಪೂಜೆ ಸಲ್ಲಿಸಲು ದಂಪತಿ ಬೈಕ್ ನಲ್ಲಿ ದಾಬಸ್ ಪೇಟೆಯಲ್ಲಿರುವ

ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು.

ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದು ಸಿಂಚನಾ ಮೇಲೆ ಟಿಪ್ಪರ್ ಹರಿದಿದ್ದು,

ಅಪಘಾತದ ತೀವ್ರತೆಗೆ ಸಿಂಚನಾ ಗರ್ಭದಲ್ಲಿದ್ದ ಮಗು ಹೊರ ಬಂದು ರಸ್ತೆಯಲ್ಲಿ ವಿಲವಿಲನೆ ಒದ್ದಾಡಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಸಿಂಚನಾ ಪತಿ ಮಂಜುನಾಥ್ ಪಾರಾಗಿದ್ದಾರೆ.

ಟಿಪ್ಪರ್ ಚಾಲಕ ಪರಾರಿ:ಅಪಘಾತದ ಬಳಿಕ ಟಿಪ್ಪರ್ ಚಾಲಕ ಸ್ಥಳದಲ್ಲಿ ಟಿಪ್ಪರ್ ನಿಲ್ಲಿಸಿ ಪರಾರಿಯಾಗಿದ್ದಾನೆ.

ಘಟನೆ ಸಂಬAಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Comment

error: Content is protected !!