theft ಹುನಗುಂದ ರಸ್ತೆಯ ಬದಿಯ ದೇವಸ್ಥಾನದಲ್ಲಿ ಮಲಗಿಕೊಂಡಾಗ : ಹಣ ಮತ್ತು ಮೊಬೈಲ್ ಕಳ್ಳತನ
ಹುನಗುಂದ : ಆಂದ್ರಪ್ರದೇಶ ರಾಜ್ಯದ ಮದನಪಲ್ಲಿಯಿಂದ ರಾಜಸ್ಥಾನ ರಾಜ್ಯದ ಜೆಸಲ್ಮೆರ ಜಿಲ್ಲೆಯಲ್ಲಿರುವ ಭಗವಾನ ರಾಮದೇವಜೀ ದೇವಸ್ಥಾನಕ್ಕೆ ಪಾದಯಾತ್ರೆ ಹೋಗುವಾಗ ಹುನಗುಂದ-ಆಲಮಟ್ಟಿ ಎನ್.ಎಚ್-೫೦ ರಸ್ತೆಯ ಬೆಳಗಲ್ ಕ್ರಾಸ ಹತ್ತಿರ ಇರುವ ಎದುರು
ಮಾರುತೇಶ್ವರ ದೇವಸ್ಥಾನದಲ್ಲಿ ರಾತ್ರಿ ತಮ್ಮ ಬ್ಯಾಗಗಳನ್ನು ಹತ್ತಿರ ಇಟ್ಟುಕೊಂಡು ಮಲಗಿಕೊಂಡಾಗ ಯಾರೋ ಕಳ್ಳರು ಮಧ್ಯರಾತ್ರಿ
ಬ್ಯಾಗಿನಲಿಟ್ಟದ 80 ಸಾವಿರ ಹಣ ಮತ್ತು 30 ಸಾವಿರ ರೂ ಕಿಮತ್ತಿನ ಮೊಬೈಕ್ ಹಾಗೂ ಕಾರಿನ ಕೀ ಹೀಗೆ ಒಟ್ಟು 1.10.000 ರೂ ಕಿಮ್ಮತ್ತಿನ
ವಸ್ತುಗಳನ್ನು ಕಳ್ಳನತ ಮಾಡಿಕೊಂಡು ಹೋಗಿದ್ದಾರೆ ಎಂದು ಹುನಗುಂದ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ದೂರನ್ನು
ದಾಖಲಿಸಿಕೊಂಡು ಪೋಲಿಸರು ತನಿಖೆ ನಡೆಸಿದ್ದಾರೆ.
ವರದಿ : ಭೀಮಣ್ಣ ಗಾಣಿಗೇರ