ಸಾಮರಸ್ಯತೆಯಿಂದ ಹೋಳಿ ಮತ್ತು ರಂಜಾನ್ ಆಚರಿಸಲು ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ ಕರೆ
ಹೋಳಿ ಹುಣ್ಣಿಮೆ ಹಬ್ಬವನ್ನು ಮತ್ತು ರಂಜಾನ್ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಕೋಮು ಸೌಹಾರ್ದತೆಯಿಂದ ಯುವಕರು ಹಿರಿಯರು ಆಚರಿಸಬೇಕೆಂದು ಪಿಎಸ್‌ಐ ಲಕ್ಕಪ್ಪ ಜೋಡಟ್ಟಿ ಹೇಳಿದರು.
ಹುನಗುಂದ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಮಂಗಳವಾರ ನಡೆಸಿದ ಶಾಂತಿ ಪರಿಪಾಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಲೋಕಸಭಾ ಚುನಾವಣೆಯ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಬಣ್ಣದ ಹಬ್ಬದಂದು ಠಾಣಾ ವ್ಯಾಪ್ತಿಯಲ್ಲಿ ಸುರಕ್ಷತಾ ಪಾಲನೆ ಸೂಕ್ತ ಪೊಲೀಸ್ ಸಂಚಾರ ಇರುತ್ತದೆ. ಹಿಂದೂ ಮುಸ್ಲಿಂರು ಕುಡಿಕೊಂಡು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದನೆ ನೀಡಬಾರದು. ಹಾಗೇನಾದರೂ ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡುವರ ಮೇಲೆ ಸೂಕ್ತ ಕಾನೂನು ಜರುಗಿಸಲಾಗುವುದು.
ಮುಖಂಡ ಅಮರೇಶ ನಾಗೂರ ಮಾತನಾಡಿ ವಿಧತೆಯಲ್ಲಿ ಏಕತೆಗೆ ಹೆಸರಾದ ದೇಶದ ಭವ್ಯತೆಗೆ ನಾವೆಲ್ಲ ಒಂದಾಗಿ ಕೋಮು ಸೌಹಾರ್ದಯುತದಿಂದ ಹೋಳಿ ಆಚರಿಸೋಣ. ಬಲವಂತವಾಗಿ ಬಣ್ಣವನ್ನು ಎರಚಬಾರದು.ರಾಸಾಯನಿಕ ಕೆಮಿಕಲ್ ಮಿಶ್ರಿತವಾದ ಬಣ್ಣವನ್ನು ಉಪಯೋಗಿಸಬಾರದು ಎಂದರು.
ಮುಖಂಡ ಮಹಾಂತೇಶ ಹಳ್ಳೂರ ಮಾತನಾಡಿ ಹೋಳಿ
ಸಂಭ್ರಮದ ಹಬ್ಬವಾಗಬೇಕೆ ಹೊರತು ಮತ್ತೊಬ್ಬ ಆರೋಗ್ಯದ ಮೇಲೆ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವಂತಾಗಬಾರದು. ೧೦ನೇ ತರಗತಿಯ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆಯುವ ಸಮಯವಾಗಿದ್ದರಿಂದ ಪ್ರತಿದಿನ ರಾತ್ರಿ ೧೦ರ ನಂತರ ಹಲಗೆ ಬಾರಿಸದಂತೆ, ಒತ್ತಾಸೆಯಿಂದ ಬಣ್ಣ ಎರಚದಂತೆ ಯುವಕರಿಗೆ ಪೊಲಿಸರು ಕ್ರಮ ಕೈಗೊಳ್ಳಬೇಕು. ಎಂದು ತಿಳಿಸಿದರು.
ಮುಖಂಡ ಬಸವರಾಜ ಗೊಣ್ಣಾಗರ, ವಿಜಯ ಬಾವಿಕಟ್ಟಿ, ರಾಘು ಬಿಸನಾಳ, ಹುಸೇನಬಾಷಾ ನದಾಫ್, ಅಹ್ಮದ ನದಾಫ್, ಸಮೀರ ಸುತಗುಂಡಾರ, ಅಮರೇಶ ಬಂಡರಗಲ್ಲ, ಸಿದ್ದಪ್ಪ ದೊಡಮನಿ, ಬಸವರಾಜ ವಾಲೀಕಾರ, ಮಂಜುನಾಥ ಬಡಿಗೇರ, ಲಕ್ಷö??ಣ ಗಾಯಕವಾಡ ಸೇರಿದಂತೆ ಇತರರು ಇದ್ದರು.