property ಖಾಸಗಿ ವ್ಯಕ್ತಿಗಳಿಂದ ಆಸ್ತಿ ಲೂಟಿಗೆ ಹುನ್ನಾರ : ಸಂಘದ ಕಾರ್ಯಾಧ್ಯಕ್ಷ ಸುದ್ದಿಗೋಷ್ಠಿ
ಹುನಗುಂದ: ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶಾಲೆಯ ಆವರಣಕ್ಕೆ ೯೯ ವರ್ಷ ಮೂರು ಎಕರೆ ಆರು ಗುಂಟೆ ಲೀಸ್ ನೀಡಿದ ಜಾಗೆಯನ್ನು ಖಾಸಗಿ ಇಬ್ಬರು ವ್ಯಕ್ತಿಗಳು ಅಧಿಕಾರ ದುರಪಯೋಗ ಪಡಿಸಿಕೊಂಡು ಲೀಸ್ ಅಂತ ಇದ್ದಿದನ್ನು ಅಳಿಸಿ ಖುಷ್ಕಿ ಜಮೀನು ಅಂತ ಜಾಗೆಯನ್ನು ಖರೀದಿ ಮಾಡಿಕೊಂಡಿದ್ದಾರೆ ಎಂದು ವಿ.ಮ.ವಿ.ವ ಸಂಘದ ಕಾಯಾಧ್ಯಕ್ಷ ವೀರಣ್ಣ ಚರಂತಿಮಠ ಆರೋಪಿಸಿದರು.
ಪಟ್ಟಣದ ವಿ.ಮ.ವಿ.ವ ಸಂಘದ ಕಾರ್ಯಾಲಯದಲ್ಲಿ ಗುರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಲಕಲ್ಲ ವಿಜಯ ಮಹಾಂತೇಶ ಸ್ವಾಮಿಗಳು ಅದರ ಅಧ್ಯಕ್ಷತೆಯಲ್ಲಿ ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ನಡೆಯುತ್ತಿದ್ದು ನೂರಾರು ವರ್ಷಗಳ ಇತಿಹಾಸ ಹೊಂದಿದ ಈ ಸಂಸ್ಥೆ ಒಂದು ಸಾರ್ವಜನಿಕವಾದ ಈ ಸಂಸ್ಥೆಯಾಗಿದ್ದು ನಾಲ್ಕು ಕ್ಯಾಂಪಸ್‌ಗಳನ್ನು ಹೊಂದಿದ್ದು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘಕ್ಕೆ ೯೯ ವರ್ಷಗಳ ವರೆಗೆ ಲೀಸ್ ನೀಡಿದ ಬಿಂದುರಾವ್ ಕುಲಕರ್ಣಿ ನೀಡಿದ ರಿ.ಸ.ನಂ ೪೫೮/೧ ಕ್ಷೇತ್ರ ೩ ಎಕರೆ ೬ ಗುಂಟೆ ಮೊದಲು ಲೀಸ್ ಜಮೀನು ಇದ್ದು ಶಾಲೆಯ ಆಟದ ಮೈದಾನ ಎಂದು ನೊಂದನೆಯಾಗಿದ್ದು, ಕುಲಕರ್ಣಿಯವರ ಕುಟುಂಬಸ್ಥರು ನಾಲ್ಕು ಜನರು ಸಂಸ್ಥೆಗೆ ೨೦೦೧ ರಲ್ಲಿ ೫೦ ಸಾವಿರವನ್ನು ತೆಗೆದುಕೊಂಡು ಸಂಸ್ಥೆಗೆ ಬಿಟ್ಟು ಕೊಟ್ಟಿದ್ದಾರೆ. ಇದರ ಮಧ್ಯೆ ಇಬ್ಬರು ಖಾಸಗಿ ವ್ಯಕ್ತಿಗಳು ಇನ್ನೂ ೨೨ ವರ್ಷ ಲೀಸ್ ಇದ್ದು ಇನ್ನೂ ಮುಗಿಯಲಾರದೆ ಈ ರೀತಿಯಾಗಿ ಉದ್ದಟತನದ ಕೆಲಸವನ್ನು ಮಾಡಿದ್ದಾರೆ. ಕೋರ್ಟನಲ್ಲಿ ರಾಜೀಯಾಗಿ ಡಿಗ್ರಿಯಾಗಿದೆ ಸಂಸ್ಥೆಯ ಆವರಣ ಅಂತ ಆಗಿದೆ. ಅಧಿಕಾರ ಇದೆ ಅಂತ ಯಾವುದೇ ಉದ್ದಟತನ ಕೆಲಸವನ್ನು ಯಾರು ಮಾಡಬಾರದು ಈಗಾಗಲೇ ಕರ್ನಾಟಕ ಹೈಕೋಟ್ ತಡೆಯಾಜ್ಞೆಯನ್ನು ನೀಡಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕರಿಗೆ ಇಬ್ಬರಿಗೆ ಬೋಗಸ್ ಅಟ್ರಾಸಿಟಿ ಕೇಸ್ ಅವರು ಮಾಡಲಾಗಿದ್ದು. ಬೋಗಸ್ ಇದ್ದಾಗ ಯಾರನ್ನು ಅರೆಸ್ಟ್ ಮಾಡಲು ಬರುವುದಿಲ್ಲ ಕಾನೂನು ಕೇಳಿದ್ದೇವೆ. ಗುರವಾರ ರಾತ್ರಿ ಏಕಾಏಕಿಯಾಗಿ ಶಾಲೆಯ ಕೌಂಪೋಡನ್ನು ಎರಡು ಜೆಸಿಬಿ ಮತ್ತು ಹಿಟ್ಯಾಚಿಯಿಂದ ನಂಬರ ಪ್ಲೇಟ್ ತೆಗೆದು ಕೌಂಪೋಡ್ ಒಡೆಯುವ ಕೆಲಸವನ್ನು ಮಾಡಿದ್ದಾರೆ. ಅವರ ಮೇಲೆ ನೂರಕ್ಕು ನೂರರಷ್ಟು ಮಾನನಷ್ಟ ಮೊಕದೆಮಿ ಕೇಸ್ ಹಾಕುತ್ತೇವೆ. ನ್ಯಾಯಾಲಯದ ತಡೆಯಾಜ್ಞೆ ಇರುವಾಗ ಈ ರೀತಿಯಾಗಿ ಮಾಡಿದಾಗ ಅವರ ಮೇಲೆ ಸೂಕ್ರ ಕ್ರಮವಹಿದ್ದೇವೆ.
ಅಧಿಕಾರಿಗಳು ಯಾರದೋ ಮಾತು ಕೇಳಿ ಕಾನೂನು ಬಿಟ್ಟು ಕೆಲಸ ಮಾಡಿದರೆ ಅವರ ಮೇಲೆಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕಾನೂನು ಬದ್ದವಾದ ಕೆಲಸವನ್ನು ಮಾತ್ರ ಮಾಡಬೇಕು.ಅಧಿಕಾರ ಮತ್ತು ಸರ್ಕಾರ ಇಂದು ಇರುತ್ತೇ ನಾಳೆ ಹೋಗುತ್ತೆದೆ. ಆದ್ದರಿಂದ ಅಧಿಕಾರಿಗಳು ಕಾನೂನು ಮೀರಿ ಕೆಲಸವನ್ನು ಯಾವುದೇ ಕಾರಣಕ್ಕೆ ಮಾಡಬಾರದು. ಬೇರೆಯವರ ಮಾತು ಕೇಳಿ ಕೆಲಸವನ್ನು ಮಾಡಿದರೆ ಅಧಿಕಾರಿಗಳೇ ನೇರ ಹೋಣೆಯನ್ನು ಮಾಡಲಾಗುವುದು. ಕಾನೂನು ಬಿಟ್ಟು ನಾವು ಏನು ಮಾಡುವುದಿಲ್ಲ ಕಾನೂನು ಪ್ರಕಾರ ಕ್ರಮವಹಿಸಿ ಕೆಲ¸ವನ್ನು ಸಂಸ್ಥೆಯ ಹಿತದೃಷ್ಟಿಯಿಂದ ಮಾಡುತ್ತೇವೆ ಎಂದು ಹೇಳಿದರು.
ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ, ನಿರ್ದೇಶಕರಾದ ಅರುಣೋದಯ ದುದ್ಗಿ, ರವಿ ಹುಚನೂರ , ಬಸವರಾಜ ಕೆಂದೂರ, ಮಹಾಂತೇಶ ಕತ್ತಿ ಇತರರು ಇದ್ದರು.