Mahadayi ಮಹಾದಾಯಿ ನೀರಿನ ಹೋರಾಟದಲ್ಲಿ ಇಳಕಲ್ ಹುನಗುಂದ ರೈತರು ಭಾಗಿ
ಇಳಕಲ್ : ಧಾರವಾಡದಲ್ಲಿ ಮಂಗಳವಾರದAದು ನಡೆದ ಕಳಸಾ ಬಂಡೂರಿ ಮತ್ತು ಮಹಾದಾಯಿ ನದಿ ನೀರಿನ ಹೋರಾಟದಲ್ಲಿ
ಇಳಕಲ್ ಹುನಗುಂದ ಅವಳಿ ತಾಲೂಕುಗಳ ರೈತರು ಸಂಚಾಲಕ ಗುರು ಗಾಣಿಗೇರ ನೇತೃತ್ವದಲ್ಲಿ ಪಾಲ್ಗೊಂಡರು.
ಇಲ್ಲಿಂದ ಧಾರವಾಡಕ್ಕೆ ತೆರಳಿ ಅಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ರೈತರು ಕಳಸಾ
ಬಂಡೂರಿ ಮತ್ತು ಮಹಾದಾಯಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಮಯದಲ್ಲಿ ರೈತ ಮುಖಂಡರಾದ ರಸೂಲಸಾಬ ತಹಸೀಲ್ದಾರ, ರಿಯಾಜ್ ನದಾಫ್ , ಬಸನಗೌಡ ಪೈಲ್ ಮತ್ತು ಮಹಿಳೆಯರು ಭಾಗವಹಿಸಿದ್ದರು.