Ilakal: RCB fan Nekara Megharaj was happy to wear this saree written on the saree for his daughter. ಇಳಕಲ್ : ಸೀರೆಯಲ್ಲಿ ಈ ಸಲ್ ಕಪ್ ನಮ್ದೇ ಬರೆದ ಸೀರೆಯನ್ನು ಮಗಳಿಗೆ ಉಡಿಸಿ ಖುಷಿ ಪಟ್ಟ ಆರ್‌ಸಿಬಿ ಅಭಿಮಾನಿ ನೇಕಾರ ಮೇಘರಾಜ

WhatsApp Group Join Now
Telegram Group Join Now
Instagram Group Join Now
Spread the love

 

ಇಳಕಲ್ ಸೀರೆಯಲ್ಲಿ ಈ ಸಲ್ ಕಪ್ ನಮ್ದೇ !!

 

ಇಳಕಲ್ : ಸೀರೆಯಲ್ಲಿ ಈ ಸಲ್ ಕಪ್ ನಮ್ದೇ ಬರೆದ ಸೀರೆಯನ್ನು ಮಗಳಿಗೆ ಉಡಿಸಿ ಖುಷಿ ಪಟ್ಟ ಆರ್‌ಸಿಬಿ ಅಭಿಮಾನಿ ನೇಕಾರ ಮೇಘರಾಜ

 

  ಇಳಕಲ್ :  ಕೈಮಗ್ಗದ ಸೀರೆಯಲ್ಲಿ ನಾನಾ ರೀತಿಯ ಕಲೆಯನ್ನು ಪ್ರದರ್ಶನ ಮಾಡಿದ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ನೇಕಾರ ಮೇಘರಾಜ ಗುದ್ದಾಟಿ ಆರ್ ಸಿಬಿ ತಂಡ ಪವರ್ ಪ್ಲೇಯಲ್ಲಿ ಸ್ಥಾನ ಪಡೆಯುತ್ತಿದ್ದ ಹಾಗೇಯೇ ಈ ಸಲ ಕಪ್ ನಮ್ದೇ ಎಂದು ನೇಯ್ದ ಸೀರೆಯನ್ನು ಮಗಳಿಗೆ ಉಡಿಸಿ ಸಂಭ್ರಮ ಪಟ್ಟಿದ್ದಾರೆ.

 

ಹೌದು ಶನಿವಾರದಂದು ರಾತ್ರಿ ನಡೆದ ಚೆನೈ ಬೆಂಗಳೂರು ಐಪಿಎಲ್ ಸೆಣಸಾಟದಲ್ಲಿ ಬೆಂಗಳೂರು ೨೭ ರನ್ನುಗಳಿಂದ ಪ್ಲೇ ಆಫ್ ಹಂತಕ್ಕೆ ಹೋದ ಕೂಡಲೇ ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಆರ್ ಸಿಬಿ ಈ ಸಲ ಕಪ್ ನಮ್ದೇ , ನಮ್ಮ ಬೆಂಗಳೂರು ಎಂದು ಬರೆದ ಸೀರೆಯನ್ನು ಮಗಳಿಗೆ ಉಡಿಸಿ ಅದನ್ನು ಎಲ್ಲೆಡೆ ಹಂಚಿಕೊಂಡಿದ್ದಾರೆ.

 

ವರದಿ: ಭೀಮಣ್ಣ ಗಾಣಿಗೇರ ( ಇಳಕಲ್ಲ)                                                ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 


Spread the love

Leave a Comment

error: Content is protected !!