Ilakal Urban Bank ಇಳಕಲ್ ಅರ್ಬನ್ ಬ್ಯಾಂಕಿನ ಸಂಸ್ಥಾಪನಾ ದಿನ ಆಚರಣೆ
ಇಳಕಲ್ : ಇಲ್ಲಿನ ಇಳಕಲ್ ಕೋ ಆಪರೇಟಿವ್ ಬ್ಯಾಂಕ್ (ಅರ್ಬನ್) ಸಂಸ್ಥಾಪನಾ ದಿನವನ್ನು ಶುಕ್ರವಾರದಂದು ಆಚರಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಅರವಿಂದ ಮಂಗಳೂರ ಚಿತ್ತರಗಿ ಶ್ರೀವಿಜಯ ಮಹಾಂತ ಶಿವಯೋಗಿಗಳ ಮತ್ತು ಬ್ಯಾಂಕಿನ ಭಾವಚಿತ್ರ ಹಾಗೂ
ಬಾಲಾಜಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು ಈ ಸಮಯದಲ್ಲಿ ಉಪಾಧ್ಯಕ್ಷೆ ವೀಣಾ ಅರಳಿಕಟ್ಟಿ
ನಿರ್ದೇಶಕರಾದ ಡಾ ಅರುಣಾ ಅಕ್ಕಿ, ಗೌತಮ ಬೋರಾ,ಲಕ್ಷ್ಮಣ ಗುರಂ ಬಸವರಾಜ ತಾಳಿಕೋಟಿ,
ಮಲ್ಲಿಕಾರ್ಜುನ ಅಗ್ನಿ, ಪ್ರವೀಣ ಹೂಲಗೇರಿ, ಜಗದೀಶ ಜಾಜು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ನಾಗರಾಜ ಕುಟಗಮರಿ ಪೂಜೆಯ ವ್ಯವಸ್ಥೆ ಮಾಡಿದ್ದರು.