Ilakal woman cheated ಇಳಕಲ್ ಮಹಿಳೆಗೆ ವಂಚನೆ : ನೈಜಿರಿಯಾ ಮೂಲದ ವ್ಯಕ್ತಿ ಬಂಧಿಸಿದ ಸಿಇಎನ್ ಪೊಲೀಸರು
ಬಾಗಲಕೋಟೆ : ಸಿಇಎನ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಮಾಡಿ ನೈಜಿರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಿ ಬಂಧಿತನಿAದ ೪ ಮೊಬೈಲ್, ೧ ಲ್ಯಾಪ್‌ಟಾಪ್, ಪಾಸ್ಪೋರ್ಟ್,ಯುಎಸ್ ಡಾಲರ್ ಇರುವ ಹಾಳೆಯ ಬಂಡಲ್ ಗಳು ಜಪ್ತಿ ಮಾಡಿಕೊಂಡ ಘಟನೆ ಗುರುವಾರ ಇಲಕಲ್ ನಲ್ಲಿ ನಡೆದಿದೆ.
ನೈಜಿರಿಯಾ ಮೂಲದ ವ್ಯಕ್ತಿ ಬಾಗಲಕೋಟೆಯ ಇಳಕಲ್ ಮಹಿಳೆಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಲಕ್ಷಾಂತರ ರೂ. ವಂಚನೆ ಮಾಡಿದ್ದಾನೆ. ಈತ ಈಗಾಗಲೇ ಮದುವೆ ಆಗಿ ಡಿವೋರ್ಸ್ ಆಗಿದ್ದ ಮಹಿಳೆಯನ್ನು ಮ್ಯಾಟ್ರಿಮೋನಿ ಮೂಲಕ ಮಹಿಳೆಗೆ ಪರಿಚಯ ಆಗಿದ್ದ, ಮದುವೆಯಾಗೋದಾಗಿ ನಂಬಿಸಿದ್ದ.
ಸುಮಾರು ೫,೫೫,೦೦೦ ರೂ. ವಂಚನೆ ಮಾಡಿದ್ದಾನೆ. ಈ ಸಂಬAಧ ಕಾರ್ಯಾಚರಣೆ ನಡೆಸಿದ ಬಾಗಲಕೋಟೆ ಸಿಇಎನ್ ಪೊಲೀಸರು ವಂಚನೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ನೈಜಿರಿಯಾ ವ್ಯಕ್ತಿಯನ್ನು ಅಲಿವರ್ ವುಗುವೊ ಒಕಿಚಿಕು ಎಂದು ಗುರುತಿಸಲಾಗಿದೆ. ಆರೋಪಿತ ಸತ್ಯ ಅಮಿತ್ ಎಂದು ಹೆಸರು ಬದಲಿಸಿ ಲಂಡನ್ ನಿವಾಸಿ ಎಂದು ಮ್ಯಾಟ್ರಿಮೋನಿಯನಲ್ಲಿ ವಿವರ ಹಾಕಿದ್ದ ಇಂಡಿಯನ್ ಮಹಿಳೆ ಮದುವೆಯಾಗೋದಾಗಿ ಹೇಳಿ ನಂಬಿಸಿದ್ದ.
ಲಂಡನ್ ನಿಂದ ಒಂದು ಕೋಟಿ ಯುಎಸ್ ಡಾಲರ್ ತಂದಿದ್ದೇನೆ. ದೆಹಲಿ ಕಸ್ಟಮ್ಸ್ ಆಫೀಸ್‌ನಲ್ಲಿ ಹಣ ಸೀಜ್ ಮಾಡಿದ್ದಾರೆ. ಬಿಡಿಸಿಕೊಳ್ಳಲು ಇಂಡಿಯನ್ ಕರೆನ್ಸಿ ಬೇಕಾಗಿದೆ ಅಂತ. ೫,೫೫,೦೦೦ ಹಣ ಹಾಕಿಸಿಕೊಂಡು ವಂಚನೆಮಾಡಿದ್ದಾನೆ.
ಹಾಲಿ ಮುಂಬೈ ನಿವಾಸಿಯಾಗಿರುವ ನೈಜೀರಿಯನ್ ಪ್ರಜೆಯಾದ ಈತ ೨೦೨೪ ರಲ್ಲಿ ವಂಚನೆ ಮಾಡಿದ್ದ. ಮೊದಲು ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆಯಾಗಿತ್ತು. ಈ ಪ್ರಕರಣವನ್ನು ತನಿಖೆ ಕಾರ್ಯಾಚರಣೆ ಮಾಡಿ ಸದ್ಯ ನೈಜೀರಿಯನ್ ನನ್ನು ಬಂಧಿಸಿದ್ದಾರೆ.