ಪಕ್ಷಿಗಳಿಗೆ ನೀರಿನ ತೊಟ್ಟಿಗಳನ್ನು ಇಟ್ಟ ಇಳಕಲ್ ಯುವಕರ ತಂಡ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಯುವಕ ವಿಶ್ವನಾಥ್ ಬಡಿಗೇರ ತನ್ನ ಜನ್ಮದಿನದ ಅಂಗವಾಗಿ ನಗರದಲ್ಲಿನ ಗಿಡ ಮರಗಳಲ್ಲಿ ಪಕ್ಷಿಗಳಿಗೆ ನೀರಿನ ತೊಟ್ಟಿಗಳನ್ನು ಇಟ್ಟು ಇತರರಿಗೆ ಮಾದರಿಯಾಗಿದ್ದಾನೆ.
ಹೌದು ತಮ್ಮ ಜನ್ಮದಿನದಂದು ಪಾರ್ಟಿಗಳನ್ನು ಮಾಡಿ ಹಣ್ಣವನ್ನು ಮತ್ತು ತಮ್ಮ ಆರೋಗ್ಯವನ್ನು ಹದಗೆಟ್ಟಿಸಿಕೊಳ್ಳುವ ಬದಲು ಇಂತಹ ಒಳ್ಳೆಯ ಕೆಲಸಗಳನ್ನು ಮಾಡಿ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳವುದು ಉತ್ತಮವಾದ ಕಾರ್ಯವಾಗಿದೆ.
ವಿಶ್ವನಾಥ ಬಡಿಗೇರ ತನ್ನ ಗೆಳೆಯರೊಂದಿಗೆ ನಗರದಲ್ಲಿನ ಗಿಡ ಮತ್ತು ಮರಗಳಲ್ಲಿ ಸಣ್ಣ ತೊಟ್ಟಿಗಳನ್ನು ಕಟ್ಟಿ ಅವುಗಳಲ್ಲಿ ನಿರು ಮತ್ತು ದವಸ ಧ್ಯಾನಗಳನ್ನು ಹಾಕಿ ಒಳ್ಳೆಯ ಕಾಯ೯ವನ್ನು ಮಾಡಿದ್ದಾರೆ.