ILKAL BANK Rangerida Urban Bank Election: Fierce competition for the selection of 16 directors ರಂಗೇರಿದ ಅರ್ಬನ್ ಬ್ಯಾಂಕ್ ಚುನಾವಣೆ : ೧೬ ನಿರ್ದೇಶಕರ ಆಯ್ಕೆಗೆ ತೀವ್ರ ಪೈಪೋಟಿ

WhatsApp Group Join Now
Telegram Group Join Now
Instagram Group Join Now
Spread the love

ILKAL BANK Rangerida Urban Bank Election: Fierce competition for the selection of 16 directors ರಂಗೇರಿದ ಅರ್ಬನ್ ಬ್ಯಾಂಕ್ ಚುನಾವಣೆ : ೧೬ ನಿರ್ದೇಶಕರ ಆಯ್ಕೆಗೆ ತೀವ್ರ ಪೈಪೋಟಿ

ILKAL BANK  ರಂಗೇರಿದ ಅರ್ಬನ್ ಬ್ಯಾಂಕ್ ಚುನಾವಣೆ : ೧೬ ನಿರ್ದೇಶಕರ ಆಯ್ಕೆಗೆ ತೀವ್ರ ಪೈಪೋಟಿ

ಇಳಕಲ್ : ಬಾಗಲಕೋಟ ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಲ್ಲಿನ ಇಳಕಲ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕಿನ ಚುನಾವಣೆ ಜನವರಿ ೫ ಭಾನುವಾರದಂದು ನಡೆಯಲಿದೆ.
೧೭ ಸ್ಥಾನಗಳ ನಿರ್ದೇಶಕರ ಚುನಾವಣೆಯಲ್ಲಿ ಈಗಾಗಲೇ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಕೆಪಿಸಿಸಿ ಸದಸ್ಯ ಶಾಂತಕುಮಾರ ಸುರಪುರ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ ೧೬ ಸ್ಥಾನಗಳಿಗೆ ೪೯ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಕಳೆದ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಮರು ಆಯ್ಕೆಗಾಗಿ ಸ್ಪರ್ಧಿಸಿದ್ದಾರೆ ಅವರೆಲ್ಲಾ ಇತರ ೧೯ ಅಭ್ಯರ್ಥಿಗಳಿಂದ ಪೈಪೋಟಿ ಎದುರಿಸುತ್ತಿದ್ದಾರೆ.ಹಳೆಯ ಆಡಳಿತ ಮಂಡಳಿಯು ಸಾಮಾನ್ಯ ಕ್ಷೇತ್ರದಿಂದ ಹತ್ತು ಅಭ್ಯರ್ಥಿಗಳನ್ನು ನಿಲ್ಲಿಸಿದ್ದು ಒಂದು ಸ್ಥಾನವನ್ನು ಬಿಟ್ಟಿದೆ ಹಳಬರ ಪೈಕಿ ಮಹಾಂತೇಶ ಅಂಗಡಿ ಮತ್ತು ಮುತ್ತುರಾಜ ಅಕ್ಕಿ ಒಂಟಿಯಾಗಿ ಸ್ಪರ್ಧೆ ಮಾಡಿದ್ದಾರೆ.

ಹಿಂದುಳಿದ ವರ್ಗ ಅ ದಿಂದ ಹಳೆಯ ಆಡಳಿತ ಮಂಡಳಿಯ ಪಂಪಣ್ಣ ಕಾಳಗಿ ನಿಂತಿದ್ದು ಅವರಿಗೆ ಎದುರಾಗಿ ಹನಮಂತ ಚುಂಚಾ, ನಗರಸಭೆಯ ಸದಸ್ಯ ಚಂದ್ರಶೇಖರ ಏಕಬೋಟೆ ಮಾಜಿ ಸದಸ್ಯ ಸಿದ್ದಪ್ಪ ತುಡಬಿನಾಳ ನಿಂತಿದ್ದಾರೆ.

ಹಿಂದುಳಿದ ವರ್ಗ ಬ ದಿಂದ ಹಳೆಯ ನಿರ್ದೇಶಕ ಎಂ ಎಸ್ ಪಾಟೀಲ ನಿಂತಿದ್ದು ಅವರಿಗೆ ಎದುರಾಗಿ ನಗರಸಭೆಯ ಮಾಜಿ ಸದಸ್ಯ ಮಹಾಂತೇಶ ಮಠ ಮತ್ತು ಸಾಮಾಜಿಕ ಹೋರಾಟಗಾರ್ತಿ ಲಕ್ಷ್ಮೀ ಬಾಯಿ ಗಾಜಿ ನಿಂತಿದ್ದಾರೆ.

ಮಹಿಳಾ ಕ್ಷೇತ್ರದಿಂದ ಇಬ್ಬರು ಆಯ್ಕೆಯಾಗ ಬೇಕಾಗಿದ್ದು ಹಳಬರಾದ ಡಾ ಅರುಣಾ ಅಕ್ಕಿ ಮತ್ತು ವೀಣಾ ಅರಳಿಕಟ್ಟಿ ಅವರನ್ನು ಹಳೆಯ ಆಡಳಿತ ಮಂಡಳಿಯ ವತಿಯಿಂದ ನಿಂತ ಕುಸುಮಾ ಸಪ್ಪಂಡಿ ಹೊಸದಾಗಿ ನಿಂತ ಲತಾ ಚಂದ್ರಹಾಸ ಹೇರೂರ, ಬಸಮ್ಮ ಕರ್ಲಿ, ಬಸವರಾಜೇಶ್ವರಿ ಮೇರನಾಳ ನಿಂತಿದ್ದಾರೆ.

ಈ ಬಾರಿ ಎಸ್ ಸಿ ಕ್ಷೇತ್ರ ಸಾಕಷ್ಟು ರಂಗೇರಿದೆ ಒಂದು ಸ್ಥಾನಕ್ಕಾಗಿ ಆರು ಅಭ್ಯರ್ಥಿಗಳು ನಿಂತಿದ್ದು ಹಳೆಯ ಆಡಳಿತ ಮಂಡಳಿಯ ಪ್ರವೀಣ ಹೂಲಗೇರಿ ಕಣದಲ್ಲಿ ಇದ್ದಾರೆ ಅವರಿಗೆ ಎದುರಾಗಿ ಎಚ್ ಪಿ ಗ್ಯಾಸ್ ಮಾಲಿಕ ಶ್ರೀಕಾಂತ ಹೊಸಮನಿ,ಸಾಮಾಜಿಕ ಕಾರ್ಯಕರ್ತ ಪರಶುರಾಮ ಬಿಸಲದಿನ್ನಿ, ಬೀದಿ ಬದಿಯ ವ್ಯಾಪಾರಸ್ಥರ ಸಂಘದ ರಾಜ್ಯ ಉಪಾಧ್ಯಕ್ಷ ಪವಾಡೆಪ್ಪ ಚಲವಾದಿ,ಪುಂಡಲೀಕ ವಡ್ಡರ ಮತ್ತು ಭೀಮಣ್ಣ ಹಾವರಗಿ ನಿಂತಿದ್ದಾರೆ.

ಸಾಮಾನ್ಯ ಕ್ಷೇತ್ರದಲ್ಲಿ ಹಲವಾರು ಹೊಸ ಮುಖಗಳು ಪೈಪೋಟಿ ನೀಡಲು ಸನ್ನದ್ದರಾಗಿದ್ದು ಹಳೆಯ ಆಡಳಿತ ಮಂಡಳಿ ಮಹಾಂತೇಶ ಕಂಪ್ಲಿ ಅವರನ್ನು ತಮ್ಮ ಗುಂಪಿನಲ್ಲಿ ಸೇರಿಸಿ ಕೊಂಡಿದೆ .ನಗರಸಭೆಯ ಸದಸ್ಯರಾದ ಸೂಗುರೇಶ ನಾಗಲೋಟಿ,ಅಮೃತ ಬಿಜ್ಜಳ,ಬಣಜಿಗ ಸಮಾಜದ ಮುಖಂಡ ಮಹಾಂತೇಶ ಚಟ್ಟೇರ, ಬೈಕ್ ಸಾಹಸಿ ಈರಣ್ಣ ಕುಂದರಗಿಮಠ , ವಿಶ್ವನಾಥ ಪಾಟೀಲ, ಬಸವರಾಜ ಜಾಲಿಹಾಳ ,ಕಿಲ್ಲಾದ ಬಸನಗೌಡ ಪಾಟೀಲ ,ಮಹಾಂತೇಶ ಪಾಟೀಲ, ಗುರುಮಹಾಂತೇಶ ಅಂಗಡಿ,ರಫೀಕ್ ಮನಿಯಾರ,ಲಕ್ಷ್ಮೀ ಕಾಂತ ಚೆಟ್ಟಿ, ಬಸವರಾಜ ನಾಡಗೌಡ , ವೀರೇಶ ಕಕ್ಕಸಗೇರಿ, ಕಿರಣ ಕಿಡದೂರ,ಬಸಯ್ಯ ಕೂಡಲಗಿಮಠ, ಮಲ್ಲಿಕಾರ್ಜುನ ಕೋರಿ, ಶ್ರೀನಿವಾಸ ಮೇಟಿ, ಮನೋಹರಗೌಡ ಗೌಡರ ಸ್ಪರ್ಧೆಯನ್ನು ಒಡ್ಡಿದ್ದಾರೆ.

ಈಗಾಗಲೇ ಬಹುತೇಕ ಕಡೆಗೆ ಶೇರುದಾರರಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಜೋರಾಗಿ ನಡೆದಿದ್ದು ಎಲ್ಲಾ ಅಭ್ಯರ್ಥಿಗಳು ಗೆಲ್ಲಲೇ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ.  ಜನೇವರಿ ೦೫ ರಂದು ಮತದಾನ ನಡೆದು ಅಂದೇ ರಾತ್ರಿ ಫಲಿತಾಂಶ ಪ್ರಕಟವಾಗಲಿದೆ, ಶೇರುದಾರ ಬಾಂಧವರು ಯಾರ ಕೈಯನ್ನು ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)

 


Spread the love

Leave a Comment

error: Content is protected !!