ಹೋಳಿ ಹುಣ್ಣಿಮೆ ಮತ್ತು ರಮಜಾನ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ : ಪಿಎಸ್‌ಐ ಸೋಮೇಶ ಗೆಜ್ಜಿ
ಮಾರ್ಚ ೨೫ ರಂದು ನಡೆಯಲಿರುವ ಹೋಳ್ಳಿ ಹುಣ್ಣಿಮೆ ಮತ್ತು ಬಣ್ಣದ ಓಕುಳಿ ಹಾಗೂ ರಮಜಾನ್ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸೋಣ ಎಂದು ಇಳಕಲ್ ಶಹರ್ ಪೋಲಿಸ್ ಠಾಣೆಯ ಪಿಎಸ್‌ಐ ಸೋಮೇಶ ಗೆಜ್ಜಿ ಹೇಳಿದರು.

ಇಳಕಲ್ ಶಹರ್ ಪೋಲಿಸ್ ಠಾಣೆಯ ಆವರಣದಲ್ಲಿ ಮಂಗಳವಾರದ0ದು ಸಾಯಂಕಾಲ ೬ ಗಂಟೆಗೆ ಹೋಳಿ ಹುಣ್ಣಿಮೆ ಮತ್ತು ರಮಜಾನ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಹೋಳಿ ಹುಣ್ಣಿಮೆಯ ಸಮಯದಲ್ಲಿ ಕಾಮದಹನ ಮಾಡುವಾಗ ಯುವಕರು ಗಲಾಟೆಯನ್ನು ಮಾಡದೇ ಶಾಂತರೀತಿಯಿ0ದ ಇರಬೇಕು ನಂತರ ಎರಡು ದಿನ ನಡೆಯುವ ಬಣ್ಣದ ಓಕುಳಿಯಲ್ಲಿ ಬೈಕ್‌ಗಳನ್ನು ಜೋರಾಗಿ ಓಡಿಸುವದು ಮತ್ತು ಸೈಲನ್ಸರ್ ತೆಗೆದು ಒದರಿಸುವದು ಮಾಡಬಾರದು ಹಬ್ಬದ ಸಮಯದಲ್ಲಿ ಯುವಕರು ಅಹಿತಕರ ಘಟನೆಗಳನ್ನು ನಡೆಸಿದರೇ ಅವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಮುಂದುವರೆದು ಮಾತನಾಡಿದ ಅವರು ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಹೆಚ್ಚು ಗುಂಪು ಕಟ್ಟುವದು ಮತ್ತು ರಾತ್ರಿ ಅಲೆದಾಡುವದನ್ನು ಮಾಡಬಾರದು ನಗರ ಭಾವೈಕ್ಯತೆಗೆ ಹೆಸರಾಗಿದ್ದು ನಾವು ನೀವು ಎಲ್ಲರೂ ಸೇರಿಕೊಂಡು ಶಾಂತಿ ಸೌರ್ಹಾದತೆಯಿಂದ ರಮಜಾನ ಹಬ್ಬವನ್ನು ಆಚರಿಸೋಣ ಎಂದು ಹೇಳಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಶಾಂತಿ ಸಮಿತಿಯ ಸದಸ್ಯರಾದ ಲಕ್ಷö್ಮಣ ಗುರಂ, ಮಹಾಂತೇಶ ಗೊರಜನಾಳ, ಅಹ್ಮದಸಾಬ ಬಾಗವಾನ ಕಂಡಕ್ಟರ್, ಮಲ್ಲು ಮಡಿವಾಳರನಾರಾಯಣ ಪೂಜಾರಿ, ನಾರಾಯಣಪ್ಪ ಚಿಲ್ಲಾಳ ಮಹಮ್ಮದಗೌಸ ಬಾಗವಾನ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ವೇದಿಕೆಯಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಶಕುಂತಲಾ ನಡುವಿನಕೇರಿ ಇದ್ದರು.