ILKAL Greetings to Zakir Talikoti, SM Loni on behalf of Ilakal Urban Development Corporation ಇಳಕಲ್ ನಗರಾಭಿವೃದ್ಧಿ ಸಂಸ್ಥೆಯಿ0ದ ವತಿಯಿಂದ ಜಾಕೀರ್ ತಾಳಿಕೋಟಿ ಎಸ್ ಎಂ ಲೋಣಿಗೆ ಸತ್ಕಾರ

WhatsApp Group Join Now
Telegram Group Join Now
Instagram Group Join Now
Spread the love

 

ಇಳಕಲ್ ನಗರಾಭಿವೃದ್ಧಿ ಸಂಸ್ಥೆಯಿ0ದ ವತಿಯಿಂದ ಜಾಕೀರ್ ತಾಳಿಕೋಟಿ ಎಸ್ ಎಂ ಲೋಣಿಗೆ ಸತ್ಕಾರ

 

ಬಾಗಲಕೋಟೆ ಜಿಲ್ಲೆ ಮಾನ್ಯತೆ ಪಡೆದ ಪತ್ರಿಕೆಗಳ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಜಾಕೀರ್ ತಾಳಿಕೋಟಿ ಮತ್ತು ಎ ಎಸ್ ಐ ಯಾಗಿ ನಿಯೋಜನೆಗೊಂಡ ಎಸ್ ಎಂ ಲೋಣಿ ಇವರನ್ನು ಇಳಕಲ್ಲದ ನಗರಾಭಿವೃದ್ಧಿ ಸಂಸ್ಥೆಯ ವತಿಯಿಂದ ಗುರುವಾರದಂದು ಮುಂಜಾನೆ ೧೦ ಗಂಟೆಗೆ ನಡೆದ ಸರಳ ಸಮಾರಂಭದಲ್ಲಿ ಸತ್ಕರಿಸಲಾಯಿತು.

ಇಳಕಲ್ಲದ ಕುಲಕರ್ಣಿ ಪೇಟೆಯ ಮಹೀಂದ್ರಕರ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಸತ್ಕಾರಕ್ಕೆ ಉತ್ತರವಾಗಿ ಮಾತನಾಡಿದ ಜಾಕೀರ್ ತಾಳಿಕೋಟಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಹೊಸ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಅದರ ಪ್ರಥಮ ಅಧ್ಯಕ್ಷರಾಗಿ ನಾನು ಆಯ್ಕೆಯಾಗಿರುವದು ಸಂತಸ ತಂದಿದೆ ನಿಮ್ಮೆಲ್ಲರ ಸಹಾಯ ಸಹಕಾರದಿಂದ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ ಸಿ ಚಂದ್ರಪಟ್ಟಣ ವಹಿಸಿದ್ದರು ಬಸವರಾಜ ಮಠದ ಕಾರ್ಯಕ್ರಮ ನಡೆಸಿಕೊಟ್ಟರು. ಎಲ್ ಬಿ ಅರಸಿದ್ದಿ , ಶರಣಪ್ಪ ಅಕ್ಕಿ ಅಹಮದ್ ಬಾಗವಾನ ಕಂಡಕ್ಟರ್, ಆರ್ ಪಿ ಮಹೀಂದ್ರಕರ, ರಿಯಾಜ್ ಮಕಾನದಾರ ಮತ್ತು ಪತ್ರಕರ್ತರ ಬಳಗದವರು ಉಪಸ್ಥಿತರಿದ್ದರು.

 

 


Spread the love

Leave a Comment

error: Content is protected !!