ಹೇರ್ ಡ್ರೈಯರ್ ಮೆಷಿನ್ ಸ್ಪೋಟ : ಎರಡು ಕೈಗಳು ಛಿದ್ರ
ಇಳಕಲ್ : ಹೇರ್ ಡ್ರೈಯರ್ ಮೆಷಿನ್ ಸ್ಪೋಟಗೊಂಡು ಮಹಿಳೆಯೊಬ್ಬರ ಎರಡು ಕೈಗಳು ಛಿದ್ರ..ಛಿದ್ರಗೊಂಡ ಶುಕ್ರವಾರದಂದು ಇಳಕಲ್ಲದ ಬಸವನಗರದಲ್ಲಿ ನಡೆದಿದೆ.
ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಗಾಯಗೊಂಡವರು. ಸ್ನೇಹಿತೆಗೆ ಬಂದಿದ್ದ ಹೇರ್ ಡ್ರೈಯರ್ ಪಾರ್ಸೆಲನ್ನು ಆನ್ ಮಾಡಿದಾಗ ಸ್ಫೋಟಗೊಂಡಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಿದ್ದು ಏನು ? : ಶಶಿಕಲಾ ಎಂಬುವರ ಮನೆಗೆ ಹೇರ್ ಡೈಯರ್ ಕೊರಿಯರ್ ಮೂಲಕ ಬಂದಿತ್ತು. ಪಾರ್ಸಲ್ ಮೇಲೆ ಶಶಿಕಲಾ ಅವರ ಮೊಬೈಲ್ ನಂಬರ್ ಇದ್ದ ಹಿನ್ನೆಲೆಯಲ್ಲಿ ಕೊರಿಯರ್ ಸಿಬ್ಬಂದಿ ಶಶಿಕಲಾ ಅವರಿಗೆ ಕರೆ ಮಾಡಿ, ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ಕಲೆಕ್ಟ್ ಮಾಡಿ ಎಂದಿದ್ದಾನೆ. ಈ ವೇಳೆ ಶಶಿಕಲಾ ನಾನು ಬೇರೆ ಊರಿನಲ್ಲಿದ್ದೇನೆ. ಸ್ನೇಹಿತೆ ಬಸಮ್ಮಾ ಅವರಿಗೆ ಕರೆ ಮಾಡಿ “ಯಾವುದೋ ಪಾರ್ಸಲ್ ಬಂದಿದೆ ತೆಗೆದುಕೊಳ್ಳು” ಎಂದು ಹೇಳಿದ್ದಾರೆ.
ಬಸಮ್ಮಾ ಅವರು ಕೊರಿಯರ್ ಸಿಬ್ಬಂದಿ ಬಳಿ ಪಾರ್ಸಲ್ ಪಡೆದಿದ್ದಾರೆ. ಪಾರ್ಸಲ್ ತೆರೆದು ನೋಡಿದಾಗ ಒಳಗಡೆ ಹೇರ್ ಡ್ರೈಯರ್ ಇತ್ತು. ಆನ್ ಮಾಡಿದ್ದಾರೆ. ಬಸಮ್ಮಾ ಅವರು ಹೇರ್ ಡ್ರೈಯರ್ ಸ್ವಿಚ್ ಹಾಕಿ ಆನ್ ಮಾಡಿದಾಗ ಸ್ಫೋಟಗೊಂಡಿದೆ.ಹೇರ್ ಡ್ರೈಯರ್ ಸ್ಫೋಟದಿಂದ ಬಸಮ್ಮ ಅವರ ಎರಡು ಕೈಗಳಲ್ಲಿನ ಬೆರಳುಗಳು ಛಿದ್ರಗೊಂಡಿದೆ.