ಇಳಕಲ್ಲದ ಕಡಪಟ್ಟಿ ಫೌರ್ಮ ಹೌಸ್ ಹತ್ತಿರದ ರಾಷ್ಟಿçÃಯ ಹೆದ್ದಾರಿಯಲ್ಲಿ ಬೊಲೋರೋ ವಾಹನ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ರವಿವಾರದಂದು ಸಾಯಂಕಾಲ ೫-೨೦ ನಿಮಿಷಕ್ಕೆ ಜರುಗಿದೆ.
ಹುನಗುಂದಿ0ದ ಇಳಕಲ್ಲ ದತ್ತ ಹೊರಟ್ಟಿದ್ದ ಬೈಕ್ ಸವಾರ ಅಮರಾವತಿ ಗ್ರಾಮದ ದೇವಪ್ಪ ಸಾಬಣ್ಣ ಗೋನಾಳ ವಯಸ್ಸು (೩೭) ಇತನಿಗೆ ಬೈಕ್‌ಗೆ ಇಳಕಲ್ಲ ಮಾರ್ಗದಿಂದ ಹುನಗುಂದ ಕಡೆಗೆ ಹೊರಟ್ಟಿದ ಬೋಲೋರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಜಿಗಿದು ಲಾರಿಗೆ ಗುದ್ದಿ ತದ ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಬೋಲೋರೊ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಿಪಿಐ ಸುನೀಲ ಸವದಿ ಇಳಕಲ್ಲ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್‌ಐ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.