ಇಳಕಲ್ಲದ ನಗರದ ಜನತೆಯನ್ನು ರಂಜಿಸಿದ ಯಾತಾಳಪ್ಪಕಟ್ಟೆಯ ಹೋಳಿ ಕಾಮಣ್ಣನ ಸೋಗು
ಇಳಕಲ್ ನಗರದ ಯಾತಾಳಪ್ಪಕಟ್ಟೆಯ ಕಾಮಣ್ಣನ ಸಮಿತಿಯ ವತಿಯಿಂದ ರಾತ್ರಿ ನಡೆಸಿದ ಹೋಲಿ ಕಾಮನ ಸೋಗುಗಳು ನಗರದ ಜನರನ್ನು ರಂಜಿಸಿದವು.
ಒಂದು ಟ್ರ‍್ಯಾಕ್ಟರದಲ್ಲಿ ಕಾಮನ ಮೂರ್ತಿಯ ಪಕ್ಕದಲ್ಲಿ ರತಿದೇವಿಯರು ನಿಂತುಕೊAಡು ಸಾಗಿದರು. ಇನ್ನೊಂದು ಟ್ರ‍್ಯಾಕರದಲ್ಲಿ ಅಯೋಧ್ಯೆಯ ಶ್ರೀರಾಮಮಂದಿರ ರೂಪಕವಾಗಿ ರಾಮ, ಸೀತಾ ಮಾತಾ , ಲಕ್ಷ್ಮಣ ಮತ್ತು ಹನುಮಂತ ವೇಷಗಳು, ಉತ್ತರ ಕರ್ನಾಟಕದ ಜನಪ್ರಿಯ ಚಿತ್ರ ಕರಟಕ ದಮನಕ ಚಿತ್ರದ ಹಿತ್ತಲಾಕ ಕರಿಬ್ಯಾಡ ಮಾವ ನಾಚಿಕೆ ಆಗುತ್ತದೆ ಎಂಬ ಹಾಡಿನ ರೂಪಕಗಳು ನಗರದ ಬೀದಿಗಳಲ್ಲಿ ಸಾಗಿದಾಗ ಜನ ತಂಡೋಪತAಡವಾಗಿ ಅವುಗಳನ್ನು ನೋಡಿ ಆನಂದಿಸಿದರು.