ILKAL KPL Season 04 Cricket Tournament ಕೆಪಿಎಲ್ ಸೀಜನ್ ೦೪ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟಿಸಿದ ಲತಾ ಹೇರೂರು
ಇಳಕಲ್ : ಯುವಕರು ದುಶ್ಟಗಳನ್ನು ಬಿಟ್ಟು ಇಂತಹ ದೇಶಿ ಕ್ರೀಡೆಯಲ್ಲಿ ಭಾಗವಹಿಸಿ ದೇಹವನ್ನು ಸದೃಡವಾಗಿ ಇಟ್ಟುಕೊಳ್ಳಬೇಕು
ಎಂದು ಇಳಕಲ್ ಕೋ – ಆಪ್‌ರೇಟಿವ್ ಬ್ಯಾಂಕ್ ನಿರ್ದೇಶಕರಾದ ಲತಾ ಚಂದ್ರಹಾಸ ಹೇರೂರು ಹೇಳಿದರು.
ಇಳಕಲ್ ನಗರದ ಶಿವಪ್ಪ ಅಕ್ಕಿ ಅವರ ಜಾಗೆಯಲ್ಲಿ ೭೬ ನೆ ಗಣರಾಜ್ಯೋತ್ಸವದ ಅಂಗವಾಗಿ ಕಿಲ್ಲಾ ಒಣಿ ಹಾಗೂ
ಕೋಳಿಪೇಟೆ ಯುವ ಬಳಗದ ವತಿಯಿಂದ ಆಯೋಜಿಸಿರುವ ಕೆಪಿಎಲ್ ಸೀಜನ್ ೦೪ ಕ್ರಿಕೆಟ್ ಟೂರ್ನಾಮೆಂಟ್‌ನ್ನು
ಉದ್ಘಾಟಿಸಿ ಮಾತನಾಡಿದ ಅವರು ಈಗೀನ ಯುವಕರು ಮೊಬೈಲ್ ಗೀಳು, ಬೈಟಿಂಗ್, ಮಧ್ಯವಸನ ಹೀಗೆ ಹಲವಾರು
ದುಶ್ಟಗಳನ್ನು ಮಡುತ್ತಾ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಆದ್ದರಿಂದ ಯುವಕರು ಅಂತಹ ದುಶ್ಟಗಳ ಬೆನ್ನಹತ್ತದೆ ನಮ್ಮ ದೇಶಿ ಕ್ರೀಡೆಗಳಾದ ಕಬ್ಬಡಿ, ಖೋ ಖೊ, ಕ್ರಿಕೆಟ್ ಇಂತಹ
ಕ್ರೀಡೆಗಳಲ್ಲಿ ಪಾಲ್ಗೊಂಡು ರಾಜ್ಯ ಮತ್ತು ಅಂತರಾಷ್ಟಿçÃಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು ಎಂದು ಕರೆ ಕೊಟ್ಟರು.
ಶಿವರಾಜ ಅಕ್ಕಿ ಮಾತನಾಡಿ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಇಂದು ನಾಲ್ಕು ಸೀಜನ್ ಅಲ್ಲ ೧೦೦ ನೇ ಸೀಜನಕ್ಕೂ
ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿದ್ದಪ್ಪ ಘಂಟಿ,ಶಿವರಾಜ ಅಕ್ಕಿ, ಪರಶುರಾಮ ಬಿಸಲದಿನ್ನಿ, ಲಿಂಗವತ ಕಾಯಕ ಸಂಜವೀನಿ ಸಹಕಾರ
ಸಂಘದ ನಿರ್ದೇಶಕ ಶರಣಗೌಡ ಪಾಟೀಲ, ಮಲ್ಲಯ್ಯ ಹಿರೇಮಠ, ಶರಣಬಸವೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ಗಿರಿರಾಜಗೌಡ ಪಾಟೀಲ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಕ್ರಿಕೆಟ್ ತಂಡದ ಮಾಲೀಕರಾದ ನಾಗರಾಜ ಪಾಟೀಲ, ಚನ್ನು ಕೌದಿ, ಪರಶುರಾಮ ಬಿಸಲದಿನ್ನಿ,
ಮಲ್ಲಿಕಾರ್ಜುನ ಗುಡಗುಂಟಿ, ನವೀನ ಮುಳ್ಳೂರ, ವೀರೇಶ ಜೇಕೇರಿ ಅವರನ್ನು ಕ್ರಿಕೆಟ್ ಅಯೋಜಕರ ತಂಡ ಸತ್ಕರಿಸಿ ಗೌರವಿಸಲಾಯಿತು.
ವರದಿ : ಭೀಮಣ್ಣ ಗಾಣಿಗೇರ ಇಳಕಲ್ಲ.