ILKAL Kuruhinashetty Run for the Kuruhinashetty Premier League tournament ಕುರುಹಿನಶೆಟ್ಟಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ

WhatsApp Group Join Now
Telegram Group Join Now
Instagram Group Join Now
Spread the love

ILKAL Kuruhinashetty  Run for the Kuruhinashetty Premier League tournament ಕುರುಹಿನಶೆಟ್ಟಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ

ILKAL Kuruhinashetty ಕುರುಹಿನಶೆಟ್ಟಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ

ಇಳಕಲ್ಲ: ಇತ್ತಿಚಿನ ದಿನಗಳಲ್ಲಿ ಯುವಕರು ಹಾಗೂ ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚಾಗಿ ಅಂಟಿಕೊAಡಿರುವುದು ಆರೋಗ್ಯಕ್ಕೆ ಹಾನಿಕಾರಕ. ಮೊಬೈಲ್ ಗಿಳನ್ನು ಬಿಟ್ಟು ಕ್ರೀಡೆಯ ಮಹತ್ವವನ್ನು ಅರಿತು ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕುರುಹಿನಶೆಟ್ಟಿ ಸಮಾಜದ ಕಾರ್ಯಾಧ್ಯಕ್ಷರಾದ ಸಿದ್ರಾಮಪ್ಪ ಮನ್ನಾಪೂರ ಕರೆ ನೀಡಿದರು.

ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ಸ್ಪೋರ್ಟ್ಸ್ & ಕಲ್ಚರ್ ಕ್ಲಬ್ ಇಲಕಲ್ (ಇವರ ಆಶ್ರಯದಲ್ಲಿ) ಸೀಸನ್೨. ಕುರುಹಿನಶೆಟ್ಟಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಾ ಯುವಕರು ಕ್ರೀಡಾ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದರು. ಕುರುಹಿನಶೆಟ್ಟಿ ಸಮಾಜದ ಉಪಾಧ್ಯಕ್ಷರಾದ ಅಶೋಕ ಶ್ಯಾವಿ ಮಾತನಾಡಿ ಕ್ರಿಡಾಪಟುಗಳು ಸೋಲು ಗೆಲವುನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಮಾಜಿ ಉಪಾಧ್ಯಕ್ಷ ಹಾಗೂ ಶ್ರೀ ನೀಲಕಂಠೇಶ್ವರ ಸ್ಪೋರ್ಟ್ಸ್ ಹಾಗೂ ಕಲ್ಚರ್ ಕ್ಲಬ್ ನ ಅಧ್ಯಕ್ಷ ಸಂತೋಷ ಐಲಿ ಮಾತನಾಡಿ ಮೊದಲು ಈ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ ಸಮಾಜದ ಹಿರಿಯರಿಗೆ,ಯುವಕರಿಗೆ,ದಾನಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ILKAL Kuruhinashetty  Run for the Kuruhinashetty Premier League tournament ಕುರುಹಿನಶೆಟ್ಟಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆಇಂತಹ ಕ್ರಿಡೆಗಳನ್ನು ಆಯೋಜಿಸಿರುವುದರಿಂದ ಯುವಕರಲ್ಲಿ ಸದೃಢವಾದ ಮನಸ್ಸು,ಸದೃಡ ಆರೋಗ್ಯ ಬೆಳೆಯಲು ಕಾರಣವಾಗುತ್ತದೆ.ಕ್ರೀಡೆಗಳಿಂದ ಪರಸ್ಪರ ಪ್ರೇಮ,ಸೌಹಾರ್ದತೆ,ಐಕ್ಯತೆ ಯಿಂದ ಬಾಳಲು ಸಹಕಾರಿಯಾಗುತ್ತದೆ.ಆಟದಲ್ಲಿ ಸೋಲು,ಗೆಲವು ಸಾಮಾನ್ಯ.ಅಂಪೈರ್ ಗಳ ತೀರ್ಮಾನಕ್ಕೆ ಗೌರವಕ್ಕೆ ನೀಡಿ ಶಾಂತತೆಯನ್ನು ಕಾಪಾಡಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕೆಂದರು.

ಇಲಕಲ್ಲ ಅರ್ಬನ್ ಬ್ಯಾಂಕಿನ ನೂತನ ಉಪಾಧ್ಯಕ್ಷ ಮಹಾಂತೇಶ ಕಂಪ್ಲಿ,ಸಮಾಜದ ಹಿರಿಯರಾದ ಮುಕುಂದಪ್ಪ ಗೋಟೂರ,ಶಿವಪ್ಪ ಜೀರಗಿ,ಈರಣ್ಣ ಗೋಟೂರ,ಮಹಾಂತೇಶ ಮನ್ನಾಪೂರ,ಶಿವಪ್ಪ ಮುಗಣಿ,ಶ್ರೀ ನೀಲಕಂಠೇಶ್ವರ ತರುಣ ಸಂಘದ ಅಧ್ಯಕ್ಷರಾದ ರಾಘವೇಂದ್ರ ಗೋಟೂರ,ಉಪಾಧ್ಯಕ್ಷರಾದ ಆನಂದ ಬೆನ್ನೂರ,ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷರಾದ ವಿಜಯಲಕ್ಷ್ಮಿ ಪೋಚಗುಂಡಿ,ಶಿಕ್ಷಕಿರಾದ ಪ್ರೇಮಲತಾ ಬಗನಾಳ, ಉಪಸ್ಥಿತರಿದ್ದರು.

ನೀಲಕಂಠೇಶ್ವರ ಸ್ಪೋರ್ಟ್ಸ್ ಹಾಗೂ ಕಲ್ಚರ್ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು,ಸಮಾಜದ ಗುರು ಹಿರಿಯರು,ತರುಣ ಸಂಘದ ಸದಸ್ಯರು,ಮಹಿಳಾ ಮಂಡಳಿಯರು ಭಾಗವಹಿಸಿದ್ದರು. ಶಾಂಭವಿ ಬೆನ್ನೂರ ಪ್ರಾರ್ಥಿಸಿದರು.ಗುಂಡಪ್ಪ ಕುರಿ ಹಾಗೂ ಮಹೇಂದ್ರ ಬೆನ್ನೂರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ILKAL Kuruhinashetty  Run for the Kuruhinashetty Premier League tournament ಕುರುಹಿನಶೆಟ್ಟಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ

 


Spread the love

Leave a Comment

error: Content is protected !!