ilkal national highway acciedent elder women hit by canter lorryಇಳಕಲ್ಲದ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೃದ್ಧಗೆ ಕ್ಯಾಂಟರ್ ಲಾರಿ ಡಿಕ್ಕಿ: ಸ್ಥಳದಲ್ಲಿಯೇ ವೃದ್ಧೆ ಸಾವು
ಇಳಕಲ್ಲದ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೃದ್ಧಗೆ ಕ್ಯಾಂಟರ್ ಲಾರಿ ಡಿಕ್ಕಿ: ಸ್ಥಳದಲ್ಲಿಯೇ ವೃದ್ಧೆ ಸಾವು
ಬಾಗಲಕೋಟ ಜಿಲ್ಲೆಯ ಇಳಕಲ್ ದ ರಾಷ್ಟ್ರೀಯ ಹೆದ್ದಾರಿಯ ಬಂಬೂ ಪ್ಯಾಲೇಸ್ ಹತ್ತಿರದ ಹೆದ್ದಾರಿಯನ್ನು ದಾಟುತ್ತಿದ್ದ ವೃದ್ದಗೆ ಉಳ್ಳಾಗಡ್ಡಿ ತುಂಬಿದ್ದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ವೃದ್ಧೆ ಸಾವನ್ನಪ್ಪಿದ್ದ ಘಟನೆ ಸೋಮವಾರದಂದು ಸಾಯಂಕಾಲ ನಡೆದಿದೆ.
ನಗರದ ಜೋಶಿಗಲ್ಲಿಯ ನಿವಾಸಿ ದುರಗಮ್ಮ ಕೋನಪ್ಪ ಬಾರಿಗಿಡದ ವಯಸ್ಸು (೮೦) ವೃದ್ಧೆ ರಸ್ತೆಗಳಲ್ಲಿ ಬಿದ್ದ ಬಾಟಲಿಗಳನ್ನು ಹಾರಿಸುತ್ತಾ ಮುರುಕಾ ಅಂಗಡಿಗೆ ಹಾಕಲು ಹೋಗುತ್ತಿದ್ದಾಗ ಹೆದ್ದಾರಿ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಸ್ಥಳಕ್ಕೆ ಶಹರ್ ಪೋಲಿಸ್ ಠಾಣೆಯ ಪಿಎಸ್‌ಐ ಸೋಮೇಶ ಗೆಜ್ಜಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅಪಘಾತದ ಸುದ್ದಿ ತಿಳಿದ ಜನರು ನೋಡಲು ಮುಗಿಬಿದ್ದರು.