
ILKAL Police ಬ್ಯಾಂಕ್‌ಗಳಿಗೆ ಭೇಟಿ ನೀಡಿದ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚನೆ
ಮಂಗಳೂರು ಹಾಗೂ ಬೀದರ್‌ನಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣ ಹಿನ್ನಲೆ ಎಚ್ಚೆತ್ತುಕೊಂಡಿರುವ ಪೋಲಿಸ್ ಇಲಾಖೆ
ಇಳಕಲ್ ಪಟ್ಟಣದ ಬ್ಯಾಂಕ್‌ಗಳಿಗೆ ಶಹರ್ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಆರ್.ನಾಯಕ ಭೇಟಿ ನೀಡಿ ಬ್ಯಾಂಕಿನ ಸುರಕ್ಷತೆ,
ಭದ್ರತೆ ಗಳನ್ನು ಪರೀಶೀಲಿಸಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವಂತೆ ಬ್ಯಾಂಕ ಸಿಬ್ಬಂದಿಗಳಿಗೆ ತಿಳಿಸಿದರು.
ಬ್ಯಾಂಕನಲ್ಲಿರುವ ಸಿಸಿ ಕ್ಯಾಮರಾಗಳ ಸರಿಯಾಗಿ ಕಾರ್ಯನಿರ್ವಹಣೆಯ ಬಗ್ಗೆ ತಿಳಿದುಕೊಂಡರು ಅಧಿಕಾರಿಗಳು
ಜಾಗೃತೆಯಿಂದ ಕಾರ್ಯನಿರ್ವಹಿಸುವಂತೆ ಹೇಳಿದರು. ಒಂದು ವೇಳೆ ಬ್ಯಾಂಕ ಸುತ್ತಮುತ್ತ ಹಾಗೂ ಒಳಗಡೆ ಅನುಮಾನಾಸ್ಪದವಾಗಿ
ಕಂಡು ಬಂದರೆ ನಮಗೆ ಮಾಹಿತಿಯನ್ನು ನೀಡಿರಿ ಎಂದು ಹೇಳಿದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)