ILKAL PUC Exam ಪಿಯುಸಿ ಪರೀಕ್ಷೆ : ಬಿಗಿ ಭದ್ರತೆ
ಇಳಕಲ್ : ನಗರದ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ ಒಂದರಿAದ ಆರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷೆಗೆ
ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ ಎಂದು ಪಿಎಸ್ ಐ ಷಹಜಹಾನ ನಾಯಕ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮಹಾಂತ ಗಂಗೋತ್ರಿಯ ಎರಡು ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ ಮತ್ತು
ಬಲಕುಂದಿ ರಸ್ತೆಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪರೀಕ್ಷೆ ನಡೆಯಲಿದ್ದು ಎಲ್ಲಾ ಕಡೆಯೂ ಬಿಗಿ ಭದ್ರತೆ
ಮಾಡಲಾಗಿದೆ. ಹೊರಗಿನಿಂದ ಯಾವುದೇ ರೀತಿಯ ನಕಲು ಮಾಡಲು ಅವಕಾಶ ಮಾಡಿಕೊಡುವದಿಲ್ಲ ಪರೀಕ್ಷಾ ಕೇಂದ್ರದ ಸುತ್ತ
ಸುತ್ತುವ ಸಾರ್ವಜನಿಕರಿಗೆ ನಿರ್ಬಂಧ ಹಾಕಲಾಗಿದೆ . ಪರೀಕ್ಷಾ ಕೇಂದ್ರದ ಸಮೀಪ ಇರುವ ಝೆರಾಕ್ಸ ಕೇಂದ್ರಗಳನ್ನು ಪರೀಕ್ಷೆ
ನಡೆಯುವ ಸಮಯದಲ್ಲಿ ಬಂದು ಮಾಡಲಾಗುವದು ಎಂದು ತಿಳಿಸಿದರು.
ಮೂರೂ ಪರೀಕ್ಷಾ ಕೇಂದ್ರಗಳಿಗೆ ಸಮಯಾವಕಾಶ ಮಾಡಿಕೊಂಡು ಸುತ್ತು ಹಾಕಿಕೊಂಡು ಬರಲು ಗಸ್ತು ವಾಹನದ ವ್ಯವಸ್ಥೆ
ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.