ILKAL ಸೆ೨ ಮತ್ತು ೩ ರಂದು ರಂಗಸಮಾಜದಿಂದ ರಂಗ ಶ್ರಾವಣ ನಾಟಕೋತ್ಸವ
ಇಳಕಲ್ : ಧಾರವಾಡದ ರಂಗಸಮಾಜ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯ ಮಹಾಂತೇಶ ತರುಣ ಸಂಘದ
ವತಿಯಿಂದ ಸೆ ೨ ಮತ್ತು ೩ ರಂದು ರಂಗ ಶ್ರಾವಣ ನಾಟಕೋತ್ಸವವನ್ನು ಬಜಾರ ಬಸವನಗುಡಿ ಆವರಣದಲ್ಲಿ
ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರಾಜು ತಾಳಿಕೋಟಿ ಹೇಳಿದರು.
ಶನಿವಾರದಂದು ಸುವರ್ಣ ರಂಗಮAದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಸೆ ೨ ಸೋಮವಾರದಂದು ರಾತ್ರಿ ೧೦ ಗಂಟೆಗೆ ಹುಬ್ಬಳ್ಳಿ ನಟರಾಜ ಕಲಾ ಬಳಗದ ವತಿಯಿಂದ ಕಂದಗಲ್ಲ
ಹನಮಂತರಾಯ ವಿರಚಿತ ಚನ್ನಬಸಪ್ಪ ಕಾಳೆ ನಿರ್ದೇಶನದ ರಕ್ತ ರಾತ್ರಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
ಸೆ ೩ ಮಂಗಳವಾರದAದು ರಾತ್ರಿ ೮ ಗಂಟೆಗೆ ರಂಗಾಯಣ ಧಾರವಾಡದ ಮಹದೇವ ಹಡಪದ ನಿರ್ದೇಶನದ ಹತಾರ
ನಾಟಕ ಪ್ರದರ್ಶನ ನಡೆಯಲಿದೆ ಅದೇ ರಾತ್ರಿ ೧೦ ಗಂಟೆಗೆ ಕೊಪ್ಪಳ ಜಿಲ್ಲೆ ಕವಲೂರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ
ವತಿಯಿಂದ ಪಿ ಬಿ ಧುತ್ತರಗಿ ವಿರಚಿತ ಬಸವರಾಜ ಹೆಸರೂರ ನಿರ್ದೇಶನದ ಸಿಂಧೂರ ಲಕ್ಷ್ಮಣ ನಾಟಕ ಪ್ರದರ್ಶನ ನಡೆಯಲಿದೆ.
ರಂಗ ಶ್ರಾವಣ ಉತ್ಸವವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಲಿದ್ದಾರೆ ಸಾನಿಧ್ಯವನ್ನು ಗುರುಮಹಾಂತಶ್ರೀಗಳು
ವಹಿಸಲಿದ್ದು ರಂಗಸಮಾಜದ ಸದಸ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ರಾಜು ತಾಳಿಕೋಟಿ ವಿವರಿಸಿದರು.
ಸುದ್ದಿಗೋಷ್ಟಡಿಯಲ್ಲಿ ಮಹಾಂತೇಶ ಗಜೇಂದ್ರಗಡ, ಮಂಜುನಾಥ ಬೆಳವಣಕಿ , ವಿಶ್ವನಾಥ ಪಾಟೀಲ ಪರತಗೌಡ ಪಾಟೀಲ ಉಮಾರಾಣಿ ಬಾರಿಗಿಡದ ಉಪಸ್ಥಿತರಿದ್ದರು.
ವೃತ್ತಿ ಮತ್ತು ಹವ್ಯಾಸಿ ಕಲಾವಿದರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಣೆ :
ವೃತ್ತಿ, ಹವ್ಯಾಸಿ ಮತ್ತು ಗ್ರಾಮೀಣ ಕಲಾವಿದರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಲು ಯೋಜನೆಗಳನ್ನು
ಸಿದ್ದಪಡಿಸಿಕೊಳ್ಳಲಾಗಿದೆ ಎಂದು ಧಾರವಾಡ ರಂಗಸಮಾಜದ ಅಧ್ಯಕ್ಷ ರಾಜು ತಾಳಿಕೋಟಿ ಹೇಳಿದರು.
ಶನಿವಾರದಂದು ಸುದ್ದಿಗೋಷ್ಠಿ ನಡೆಸಿದ ಅವರು ಧಾರವಾಡ ರಂಗಸಮಾಜಕ್ಕೆ ಬರುವ ಏಳು ಜಿಲ್ಲೆಗಳಲ್ಲಿ
ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಸಂಚರಿಸಿ ಅಲ್ಲಿನ ಕಲಾವಿದರ ಮತ್ತು ನಾಟಕ ಸಂಘಗಳ ಪರಿಸ್ಥಿತಿಯನ್ನು
ಅವಲೋಕಿಸಲಾಗಿದೆ ಇನ್ನುಳಿದ ಜಿಲ್ಲೆಗಳಾದ ಧಾರವಾಡ, ಗದಗ, ಬೆಳಗಾವಿ , ಬಾಗಲಕೋಟೆ, ವಿಜಯಪುರ
ಕಾರವಾರ ಜಿಲ್ಲೆಗಳಲ್ಲಿ ಸಂಚರಿಸಿ ಅಲ್ಲಿನ ಮೂರೂ ವಿಭಾಗದ ಕಲಾವಿದರ ಸ್ಥಿತಿಗತಿಗಳನ್ನು ಪರಿಶೀಲಿಸಲಾಗುವದು ಎಂದು ಹೇಳಿದರು .
ಸುದ್ದಿಗೋಷ್ಠಿಯಲ್ಲಿ ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಉಪಸ್ಥಿತರಿದ್ದರು.